ಉದಯಪುರ (ಪಿಟಿಐ): ಸಿನಿಮಾ ನಿರ್ಮಾಪಕರೊಬ್ಬರು ದೂರು ನೀಡಿರುವ ಕಾರಣ ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ಮುಂಬೈ ಕಿಸ್ಕಿ’ ಸಿನಿಮಾದಲ್ಲಿ ಕೆಲಸ ಮಾಡುವುದಾಗಿ ಸುನಿಲ್ ಶೆಟ್ಟಿ ಸಂಭಾವನೆಯ 70 ಲಕ್ಷದಲ್ಲಿ 21 ಲಕ್ಷವನ್ನು ಮುಂಚಿತವಾಗಿ ಪಡೆದುಕೊಂಡಿದ್ದರು.
ನಂತರ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದರಲ್ಲದೆ ಹಣವನ್ನೂ ಮರಳಿಸದೆ ಮೋಸ ಮಾಡಿದ್ದಾರೆ’ ಎಂದು ನಿರ್ಮಾಪಕ ಹೇಮೇಂದ್ರ ಸಿಂಗ್ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.