ADVERTISEMENT

ನಾಗಾಲ್ಯಾಂಡ್‌ಗೆ ರಿಯೊ ಸರ್ಕಾರ ಖಚಿತ

ಪಿಟಿಐ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ನಾಗಾಲ್ಯಾಂಡ್‌ಗೆ ರಿಯೊ ಸರ್ಕಾರ ಖಚಿತ
ನಾಗಾಲ್ಯಾಂಡ್‌ಗೆ ರಿಯೊ ಸರ್ಕಾರ ಖಚಿತ   

ಕೊಹಿಮಾ: ನಾಗಾಲ್ಯಾಂಡ್‌ನಲ್ಲಿ ಸರ್ಕಾರ ರಚಿಸುವ ವಿಶ್ವಾಸವನ್ನು ಎನ್‌ಡಿಪಿಪಿ ಮುಖ್ಯಸ್ಥ ನೆಫಿಯೂ ರಿಯೊ ವ್ಯಕ್ತಪಡಿಸಿದ್ದಾರೆ. ಬುಧವಾರ ಅಥವಾ ಗುರುವಾರ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ರಿಯೊ, ಅವರನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಹಿರಿಯ ಮುಖಂಡ ರಿಯೊ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. 60 ಸದಸ್ಯರ ಸದನದಲ್ಲಿ ತಮಗೆ 32 ಶಾಸಕರ ಬೆಂಬಲ ಇದೆ ಎಂದು ರಿಯೊ ಹೇಳಿಕೊಂಡಿದ್ದಾರೆ.

ADVERTISEMENT

ನಿರ್ಗಮಿತ ಮುಖ್ಯಮಂತ್ರಿ, ನಾಗಾಲ್ಯಾಂಡ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಎಫ್‌) ಮುಖ್ಯಸ್ಥ ಟಿ.ಆರ್‌. ಜೆಲಿಯಾಂಗ್‌ ಅವರೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. 27 ಕ್ಷೇತ್ರಗಳಲ್ಲಿ ಗೆದ್ದಿರುವ ಎನ್‌ಪಿಎಫ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ನ್ಯಾಷನಲ್‌ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಅಟೊ ಯೆಪ್ತೊಮಿ ಅವರು ಎನ್‌ಡಿಪಿಪಿ–ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಕೇಂದ್ರ ಮತ್ತು ಮಣಿಪುರದಲ್ಲಿ ಎನ್‌ಪಿಪಿ, ಬಿಜೆಪಿಯ ಮಿತ್ರಪಕ್ಷವಾಗಿದೆ. ಹಾಗೆಯೇ ಜೆಡಿಯು ಮತ್ತು ಪಕ್ಷೇತರ ಶಾಸಕ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸ್ಪಷ್ಟ ಬಹುಮತವನ್ನು ಎನ್‌ಡಿಪಿಪಿ–ಬಿಜೆಪಿ ಮಿತ್ರಕೂಟ ಹೊಂದಿದೆ ಎಂದು ರಿಯೊ ಹೇಳಿದ್ದಾರೆ.

ಈ ಎಲ್ಲ ಪಕ್ಷಗಳನ್ನು ಒಟ್ಟುಗೂಡಿಸಿ ಪೀಪಲ್ಸ್‌ ಡೆಮಾಕ್ರಟಿಕಟ್‌ ಅಲಯನ್ಸ್‌ (ಪಿಡಿಎ) ಎಂಬ ಮೈತ್ರಿಕೂಟ ರಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.