ಪಣಜಿ (ಪಿಟಿಐ): ಹೊಸ ಮಾದರಿಯ, ಸಂಪೂರ್ಣ ಸ್ವದೇಶಿ ನಿರ್ಮಿತ ಕಡಲು ಗಸ್ತು ನೌಕೆ ‘ಐಎನ್‌ಎಸ್ ಸುಮೇಧಾ’ ಶುಕ್ರವಾರ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಯಿತು.
ಈ ನೌಕೆಯ ವಿನ್ಯಾಸ ಹಾಗೂ ನಿರ್ಮಾಣವನ್ನು ಗೋವಾ ಶಿಪ್ಯಾರ್ಡ್ ಲಿಮಿಟೆಡ್ (ಜಿಎಸ್‌ಎಲ್) ಕೈಗೊಂಡಿದೆ. ನೌಕಾಪಡೆಯ ವೈಸ್ ಅಡ್ಮಿರಲ್ ಅನಿಲ್ ಚೋಪ್ರಾ ಉಪಸ್ಥಿತಿಯಲ್ಲಿ ಇಲ್ಲಿ ನಡೆದ ಸಮಾರಂಭದಲ್ಲಿ ನೌಕೆ-ಯನ್ನು ಸೇರ್ಪಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚೋಪ್ರಾ, ‘ಸ್ವದೇಶಿ ನಿರ್ಮಿತ ಈ ನೌಕೆಯನ್ನು ನಿಗದಿತ ಕಾಲಾವಧಿಯೊಳಗೆ ನೌಕಾ ಪಡೆಗೆ ಸೇರ್ಪಡೆ ಮಾಡಲಾಗಿದ್ದು ಇದಕ್ಕಾಗಿ ಜಿಎಸ್‌ಎಲ್ ಕಾರ್ಯ ಅಭಿನಂದನಾರ್ಹ’ ಎಂದರು.
105 ಮೀಟರ್ ಉದ್ದದ ಈ ನೌಕೆ ಜಿಎಸ್‌ಎಲ್ ನಿರ್ಮಿತ 200ನೇ ನೌಕೆಯಾಗಿದೆ. ಜಿಎಸ್‌ಎಲ್ ವ್ಯವಸ್ಥಾಪಕ ನಿರ್ದೇಶಕ, ನಿವೃತ್ತ ನೌಕಾ ಅಧಿಕಾರಿ ಶೇಖರ್ ಮಿಟಾಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.