ನವದೆಹಲಿ(ಪಿಟಿಐ): 'ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದನೆ ಸಂಘಟನೆಗಳು ಹಾಗೂ ಪಾಕಿಸ್ತಾನ ಸೇನೆ ನನಗೆ ಮಾರ್ಗದರ್ಶನ ನೀಡುತ್ತಿತ್ತು' ಎಂದು ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ವೇಳೆ ಬಂಧಿಸಲಾಗಿರುವ ಪಾಕ್ ಮೂಲದ ಉಗ್ರ ಬಹದ್ದೂರ್ ಅಲಿ ಹೇಳಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬುಧವಾರ ಹೇಳಿದೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎನ್‌ಐಎ ಅಧಿಕಾರಿಗಳು, ವಿಚಾರಣೆ ವೇಳೆ ಬಂಧಿತ ಉಗ್ರ ಬಹದ್ದೂರ್ ಅಲಿ ಮಹತ್ವದ ಮಾಹಿತಿ ಬಾಯ್ಬಿಟ್ಟಿದ್ದು, ತಾನು ಪಾಕಿಸ್ತಾನದ ಮೂಲದವನು ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ತಾನು ಪಾಕ್‌ನಿಂದ ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿದ್ದಾಗಿ ಹಾಗೂ ಪಾಕಿಸ್ತಾನದಲ್ಲಿ ತರಬೇತಿ ಪಡೆದು ಬಂದಿರುವುದಾಗಿ ಅಲಿ ಹೇಳಿದ್ದಾನೆ. ಗಡಿಯಲ್ಲಿ ಉಗ್ರರ ಕ್ಯಾಂಪ್‌ಗಳಿವೆ. ಅಲ್ಲಿಗೆ ಪಾಕ್ ಸೇನೆಯ ಅನುಭವಿಗಳು ನಿರಂತರ ಭೇಟಿ ನೀಡಿ, ಮಾರ್ಗದರ್ಶನ ನೀಡುತ್ತಾರೆ ಎಂದು ಅಲಿ ಬಾಯ್ಬಿಟ್ಟಿದ್ದಾಗಿ ಎನ್‌ಐಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.