ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 20:18 IST
Last Updated 3 ಜನವರಿ 2014, 20:18 IST

ನವದೆಹಲಿ (ಪಿಟಿಐ): ಪೆಟ್ರೋಲ್‌ ಬೆಲೆ ಲೀಟರಿಗೆ 75 ಪೈಸೆ ಹಾಗೂ ಡೀಸೆಲ್‌ ಬೆಲೆ ಲೀಟರಿಗೆ 50ಪೈಸೆ ಏರಿಕೆ­ಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ­ಯಲ್ಲಿ ತೈಲ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿದಿದ್ದರಿಂದ ತೈಲ ಉತ್ಪಾದನಾ ವೆಚ್ಚ ಅಧಿಕವಾಗಿದೆ. ಹಾಗಾಗಿ, ಪೆಟ್ರೋಲ್‌, ಡೀಸೆಲ್‌ ಬೆಲೆ­ಯಲ್ಲಿ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ನೂತನ ದರ ಶುಕ್ರವಾರ ಮಧ್ಯ­ರಾತ್ರಿಯಿಂದಲೇ ಜಾರಿಗೆ ಬರಲಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ ಹೊರತುಪಡಿಸಿ ಬೆಲೆ ಏರಿಕೆ ಮಾಡಲಾಗಿದ್ದು, ದರ ನಗರವಾರು ವ್ಯತ್ಯಾಸವಾಗಲಿದೆ. ಡಿ. 21ರಂದು ವ್ಯಾಟ್‌ ಹೊರತು­ಪಡಿಸಿ ಲೀಟರಿಗೆ 41ಪೈಸೆಯಂತೆ ಪೆಟ್ರೋಲ್ ದರದಲ್ಲಿ ಏರಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.