ADVERTISEMENT

ಪ್ಯಾರಿಸ್‌ನಲ್ಲಿ ಟ್ಯಾಗೋರ್ ಸಾಕ್ಷ್ಯಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಪ್ಯಾರಿಸ್‌ನಲ್ಲಿರುವ ಯುನೆಸ್ಕೊ ಪ್ರಧಾನ ಕಚೇರಿಯಲ್ಲಿ ಸೋಮವಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.

ಟ್ಯಾಗೋರ್ ಜೀವನ ಮತ್ತು ಸಾಧನೆ, ಅವರು ರಚಿಸಿದ ಕವಿತೆಗಳ ಗಾಯನವನ್ನು ಒಳಗೊಂಡ ಸಾಕ್ಷ್ಯ ಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು. ಖ್ಯಾತ ನಿರ್ದೇಶಕಿ ಅಪರ್ಣಾ ಸೆನ್ ಈ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಯುನೆಸ್ಕೊ ಪ್ರಧಾನ ಕಚೇರಿಯಲ್ಲಿ ಭಾರತ ಸರ್ಕಾರದ ವತಿಯಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಭಾಗವಾಗಿ ಟ್ಯಾಗೋರ್ ಅವರ ಕವಿತೆಗಳ ವಯೋಲಿನ್ ವಾದನ ಹಾಗೂ ಬಂಗಾಳಿ ಭಾಷೆಯ ನಿರೂಪಣೆಯನ್ನು ನೆರೆಯ ಬಾಂಗ್ಲಾ ದೇಶದ ಖ್ಯಾತ ಕಲಾವಿದರು ನಡೆಸಿಕೊಡಲಿದ್ದಾರೆ.

ಟ್ಯಾಗೋರ್ ವಿಷಯದಲ್ಲಿ ವಿಶ್ವ ಸಾಮರಸ್ಯ ಮೂಡಿಸಲು ಉನ್ನತ ಮಟ್ಟದ ಪ್ರಯೋಜಕ ಸಮಿತಿ ಎರಡು ದಿನಗಳ ಈ ಕಾರ್ಯಕ್ರಮದ ಪ್ರಯೋಜಕತ್ವ ವಹಿಸಿಕೊಂಡಿದೆ. ಭಾರತ ಮತ್ತು ಬಾಂಗ್ಲಾ ಜಂಟಿಯಾಗಿ ಟ್ಯಾಗೋರ್ ಅವರ 150ನೇ ಜನ್ಮ ದಿನಾಚರಣೆಯನ್ನು ವಿಶ್ವದ ವಿವಿಧ ಭಾಗಗಳಲ್ಲಿ ಏರ್ಪಡಿಸಲಾಗಿದೆ.

ಸಿದ್ದು, ಯುನೆಸ್ಕೊದಲ್ಲಿ ನಡೆಯುವ ಕಾರ್ಯಕ್ರಮವನ್ನು ಎರಡೂ ದೇಶಗಳು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಸೋಮವಾರ ಪ್ರಸಾರ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT