ಚೆನ್ನೈ (ಪಿಟಿಐ): ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶಿರೋಮಣಿ ಅಕಾಲಿದಳ (ಎಸ್‌ಡಿ)ದ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರು ಮಾರ್ಚ್ 14ರಂದು ಜರಗುವ ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಎಐಎಡಿಎಂಕೆ ಪಕ್ಷದ ನಾಯಕಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಶನಿವಾರ ಆಹ್ವಾನ ನೀಡಿದ್ದಾರೆ.
ಆಹ್ವಾನ ಕುರಿತು ಪ್ರತಿಕ್ರಿಯಿಸಿರುವ ಜಯಲಲಿತಾ ಅವರು `ಮಾರ್ಚ್ 18ರಂದು ಸಂಕರನ್‌ಕೊಯಿಲ್ ಅಸೆಂಬ್ಲಿಗೆ ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಉಪಚುನಾವಣೆಯ ಪ್ರಚಾರ ಅಭಿಯಾನವು ನಿಗಧಿಯಾಗಿದೆ.
ಇದರಿಂದಾಗಿ ಸಮಾರಂಭಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸಮಾರಂಭಕ್ಕೆ ಪಕ್ಷದ ಹಿರಿಯ ಮುಖಂಡರನ್ನು ಕಳುಹಿಸಿಕೊಡಲಾಗುವುದು~ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.