ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿಗೆ ತಿಳಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ: ಸಿಬಿಎಸ್‍ಇ ವಿದ್ಯಾರ್ಥಿನಿ

ಏಜೆನ್ಸೀಸ್
Published 1 ಏಪ್ರಿಲ್ 2018, 10:25 IST
Last Updated 1 ಏಪ್ರಿಲ್ 2018, 10:25 IST
ಜಾಹ್ನವಿ ಬೆಹಲ್
ಜಾಹ್ನವಿ ಬೆಹಲ್   

ಲುಧಿಯಾನ: ಸಿಬಿಎಸ್ಇ 12ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರ್ಚ್ 17ರಂದು ಪತ್ರ ಬರೆದು ತಿಳಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಜಾಬ್‍ನ ವಿದ್ಯಾರ್ಥಿನಿ ಜಾಹ್ನವಿ ಬೆಹಲ್ ದೂರಿದ್ದಾರೆ.
 
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ನಾನು ಪ್ರಧಾನಿಯವರಿಗೆ ಪತ್ರ ಬರೆದಿದ್ದೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರನ್ನು ಬಂಧಿಸಬೇಕು ಎಂದು ಜಾಹ್ನವಿ ಹೇಳಿರುವುದಾಗಿ ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾಟ್ಸ್ ಆ್ಯಪ್ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಜನರ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದರೂ ಅವರು ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಜಾಹ್ನವಿ ಹೇಳಿದ್ದಾರೆ.

12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ  ಸೋರಿಕೆ ಆಗಿದ್ದು, ಈ ವಿಷಯದ ಮರು ಪರೀಕ್ಷೆ ಏಪ್ರಿಲ್ 25ರಂದು ನಡೆಯಲಿದೆ.

ಯಾರು ಈ ಜಾಹ್ನವಿ ಬೆಹಲ್?
2016ರಲ್ಲಿ ಜಾಹ್ನವಿ ಬೆಹಲ್ ಎಂಬ 15ರ ಬಾಲಕಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರಿಗೆ ಸವಾಲು ಎಸೆದು ಸುದ್ದಿಯಾಗಿದ್ದರು.

ADVERTISEMENT

ಕನಯ್ಯಾ ಕುಮಾರ್ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕೆ  ಕನಯ್ಯಾ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೇಳಿದ್ದು ತಪ್ಪು, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೋದಿ ಬಗ್ಗೆ ಟೀಕಿಸುವುದಕ್ಕಿಂತ ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಮಾತನಾಡಬಹುದಿತ್ತು. 
ಪ್ರಧಾನಿಯವರನ್ನು ಹೊಗಳಿದ್ದ ಜಾಹ್ನವಿ, ಕನಯ್ಯಾ ಕುಮಾರ್ ಮೋದಿಯವರನ್ನು ಟೀಕಿಸುವುದಕ್ಕಿಂತ ಅವರಂತೆಯೇ ಕೆಲಸ ಮಾಡಲಿ ಎಂದಿದ್ದರು ಜಾಹ್ನವಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.