ADVERTISEMENT

‘ಬಾಯ್‌ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತ’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಪನ್ನಾಲಾಲ್
ಪನ್ನಾಲಾಲ್   

ಗುನಾ, ಮಧ್ಯಪ್ರದೇಶ: ‘ನೀವು ಸುರಕ್ಷಿತವಾಗಿ ಇರಬೇಕಾದರೆ ಬಾಯ್‌ಫ್ರೆಂಡ್ ಸಹವಾಸ ಮಾಡಬೇಡಿ’ ಎಂದು ಸ್ಥಳೀಯ ಬಿಜೆಪಿ ಶಾಸಕ ಪನ್ನಾಲಾಲ್‌ ಶಾಕ್ಯ ಅವರು ಹುಡುಗಿಯರಿಗೆ ಸಲಹೆ ಮಾಡಿದ್ದಾರೆ.

ಹುಡುಗಿಯರಿಗೆ ಬಾಯ್‌ಫ್ರೆಂಡ್ ಏಕೆ ಬೇಕು? ಎಂದು ಪ್ರಶ್ನಿಸಿರುವ ಅವರು, ಹುಡುಗಿಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕಾದರೆ ಗೆಳೆಯರಿಂದ ಅವರು ದೂರವಿರಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಇತ್ತೀಚೆಗೆ ಟಿ.ವಿ ವಾಹಿನಿಯೊಂದು ನನಗೆ ಪ್ರಶ್ನೆ ಕೇಳಿತ್ತು. ನಾನು ಇದೇ ಉತ್ತರ ನೀಡಿದ್ದೆ’ ಎಂದು ಪನ್ನಾಲಾಲ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯು ವಿದೇಶಿ ಸಂಸ್ಕೃತಿ ಎಂದು ಹೇಳುವುದು ಅವರ ಮಾತಿನ ಉದ್ದೇಶವಾಗಿತ್ತು.

ADVERTISEMENT

‘ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವವಿದೆ. ವರ್ಷದಲ್ಲಿ ನಾವು ನಾಲ್ಕು ಬಾರಿ ಮಹಿಳಾ ದಿನ ಆಚರಿಸುತ್ತೇವೆ. ನಾಲ್ಕು ಬಾರಿ ಅವರನ್ನು ಪೂಜಿಸುತ್ತೇವೆ’ ಎಂದಿದ್ದಾರೆ.

ಪನ್ನಾಲಾಲ್‌ ಅವರು ವಿವಾದಾತ್ಮಕ ಹೇಳಿಕೆಗಳಿಂದ ಈಚೆಗೆ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.