ADVERTISEMENT

ಬಾಲಕಿ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:02 IST
Last Updated 5 ಮೇ 2018, 19:02 IST

ಹೈದರಾಬಾದ್: ಗೋದಾವರಿ ಜಿಲ್ಲೆಯ ಟೆಟ್ಲಿ ಗ್ರಾಮದ ತಾನುಕು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 15ವರ್ಷದ ಬಾಲಕನೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಸಹಾಯ ಮಾಡಿದ್ದ ಆತನ ಮೂವರು ಗೆಳೆಯರಿಂದ ಈ ವಿಚಾರ ಬಹಿರಂಗಗೊಂಡಿದೆ.

‘ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಬಿಸ್ಕೆಟ್‌ ನೀಡಿ ಶಾಲಾ ಶೌಚಾಲಯಕ್ಕೆ ಕರೆದುಕೊಂಡುಹೋಗಿದ್ದಾರೆ. ಯಾರಾದರು ಬಂದರೆ ಎಚ್ಚರಿಸಲು ಆರೋಪಿಯ ಗೆಳೆಯರು ಶೌಚಾಯಲಯದ ಹೊರಗೆ ನಿಂತು ಕಾವಲು ಕಾಯ್ದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಮಾಡಿ ನಂತರ ಆಕೆಯನ್ನು ಮನೆ ಹತ್ತಿರ ಬಿಟ್ಟು ಬಂದಿದ್ದಾರೆ. ರಕ್ತಸ್ರಾವದಿಂದ ಬಳಲುತ್ತಿದ್ದ ಮಗುವನ್ನು ಕಂಡು ಆಕೆಯ ಅಜ್ಜಿ ವಿಚಾರಿಸಿದಾಗ, ಮಗು ನೀಡಿದ ವಿವರಗಳಿಂದ ಅತ್ಯಾಚಾರವಾಗಿರುವ ಬಗ್ಗೆ ಅನುಮಾನಗೊಂಡು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ADVERTISEMENT

ನಂತರ ಆ ನಾಲ್ವರು ಹುಡುಗರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ವಿಷಯ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.