ADVERTISEMENT

ಬೆಂಗಳೂರು–ಕೊಯಮತ್ತೂರು ಮಧ್ಯೆ ಡಬಲ್‌ ಡೆಕ್ಕರ್‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST
ಬೆಂಗಳೂರು–ಕೊಯಮತ್ತೂರು ಮಧ್ಯೆ ಡಬಲ್‌ ಡೆಕ್ಕರ್‌
ಬೆಂಗಳೂರು–ಕೊಯಮತ್ತೂರು ಮಧ್ಯೆ ಡಬಲ್‌ ಡೆಕ್ಕರ್‌   

ಚೆನ್ನೈ: ಬೆಂಗಳೂರು–ಕೊಯಮತ್ತೂರು ನಡುವೆ ಮುಂದಿನ ವಾರದಿಂದ ಪ್ರತಿನಿತ್ಯ ಹವಾನಿಯಂತ್ರಿತ ಡಬಲ್‌ ಡೆಕ್ಕರ್‌ ರೈಲು ಸಂಚಾರ ಆರಂಭವಾಗಲಿದೆ.

ಬೆಂಗಳೂರು–ಕೊಯಮತ್ತೂರು ಮಧ್ಯೆ ನೇರ ರೈಲು ಸಂಪರ್ಕ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಡಬಲ್‌ ಡೆಕ್ಕರ್‌ ರೈಲಿನೊಂದಿಗೆಅವರ ಬಹು ದಿನಗಳ ಕನಸು ನನಸಾಗುವ ಕಾಲ ಸನ್ನಿತವಾಗಿದೆ.

ಈ ಎರಡೂ ನಗರಗಳ ನಡುವೆ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದರೂ ಈವರೆಗೆ ನೇರ ರೈಲು ಸಂಪರ್ಕ ಇಲ್ಲ. ಬೆಂಗಳೂರಿನಿಂದ ಬೇರೆ ನಗರ ಗಳಿಗೆ ತೆರಳುವ ಏಳು ರೈಲುಗಳು ಕೊಯಮತ್ತೂರು ಮೂಲಕ ಹಾಯ್ದು ಹೋಗುತ್ತವೆ.

ADVERTISEMENT

ಬೆಂಗಳೂರು–ಕೊಯಮತ್ತೂರು ಮಧ್ಯೆ ಹಗಲು ಹೊತ್ತಿನಲ್ಲಿ ಸಂಚರಿಸಲಿರುವ ಉದಯ್‌ ಎಕ್ಸ್‌ಪ್ರೆಸ್‌ ಡಬಲ್‌ ಡೆಕ್ಕರ್‌ ರೈಲು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ್ದು, ವೈ–ಫೈ ಸಂಪರ್ಕ ಹೊಂದಿದೆ.ತಿಂಡಿ, ಆಹಾರ ವಿತರಿಸುವ ಸ್ವಯಂಚಾಲಿತ ಯಂತ್ರಗಳು ರೈಲಿನಲ್ಲಿರುತ್ತವೆ.

ಒಟ್ಟಾರೆ ಈ ರೈಲು ಪ್ರಯಾಣ ಪ್ರಯಾಣಿ ಕರಿಗೆ ವಿಮಾನಯಾನದ ಅನುಭವ ಮತ್ತು ಖುಷಿ ನೀಡುತ್ತದೆ ಎಂಬುವುದು ರೈಲ್ವೆ ಇಲಾಖೆಯ ವಿಶ್ವಾಸವಾಗಿದೆ.

ಚೆನ್ನೈನ ಪೆರಂಬೂರು ರೈಲ್ವೆ ವರ್ಕ್‌ಶಾಪ್‌ ನಲ್ಲಿ ಇದಕ್ಕಾಗಿಯೇ ವಿಶೇಷ ವಿನ್ಯಾಸದ ಬೋಗಿಗಳನ್ನು ತಯಾರಿಸಲಾಗಿದೆ. ಈಗಾಗಲೇ ಬೋಗಿಗಳನ್ನು ಕೊಯಮತ್ತೂರು ರೈಲ್ವೆ ನಿಲ್ದಾಣಕ್ಕೆ ರವಾನಿಸಲಾಗಿದೆ.

2016ರ ರೈಲ್ವೆ ಬಜೆಟ್‌ನಲ್ಲಿ ಬೆಂಗಳೂರು–ಕೊಯಮತ್ತೂರು ಮಧ್ಯೆ ಹೊಸ ರೈಲು ಘೋಷಿಸಲಾಗಿತ್ತು.

ಕರ್ನಾಟಕದಲ್ಲಿ ವಿಧಾನಸಭಾ ಚುನಾ ವಣಾ ನೀತಿಸಂಹಿತೆ ಜಾರಿಯಲ್ಲಿ ರುವುದರಿಂದ ಅದ್ಧೂರಿ ಉದ್ಘಾಟನಾ ಸಮಾರಂಭ ಇಲ್ಲದೆ ಹೊಸ ರೈಲಿಗೆ ಚಾಲನೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

‘ಎರಡೂ ನಗರಗಳ ಮಧ್ಯೆ ರಾತ್ರಿ ಹೊತ್ತಿನಲ್ಲಿ ರೈಲು ಸಂಚಾರ ಆರಂಭಿಸುವಂತೆ ಮನವಿ ಮಾಡ ಲಾಗಿತ್ತು. ರಾತ್ರಿ ಪ್ರಯಾಣದಿಂದ ಸಮಯ ಉಳಿತಾಯವಾಗುತಿತ್ತು. ಹಗಲು ಹೊತ್ತಿನಲ್ಲಿ ಪ್ರಯಾಣ ಮಾಡುವರ ಸಂಖ್ಯೆ ಕಡಿಮೆ. ಹೀಗಾಗಿ ಈ ರೈಲು ಯಶಸ್ವಿಯಾಗುತ್ತದೆ ಎಂಬ ನಂಬುಗೆ ಇಲ್ಲ’ ಎಂದು ಭಾರತೀಯ ವಾಣಿಜ್ಯೋದ್ಯಮ ಸಂಸ್ಥೆ (ಐಸಿಸಿಐ) ಕೊಯಮತ್ತೂರು ಘಟಕದ ಅಧ್ಯಕ್ಷೆ ವನಿತಾ ಮೋಹನ್‌ ಪ್ರತಿಕ್ರಿಯಿಸಿದ್ದಾರೆ

**

ವೇಳಾಪಟ್ಟಿ: ರೈಲಿನ ಹೆಸರು ಹೊರಡುವ ಸ್ಥಳ ಹೊರಡುವ ವೆಳೆ ತಲುಪುವ ವೇಳೆ

* ಕೊಯಮತ್ತೂರು–ಬೆಂಗಳೂರು (22666) ಕೊಯಮತ್ತೂರು ಬೆಳಿಗ್ಗೆ 5.45 ಗಂಟೆ ಅಪರಾಹ್ನ 12.40 ಗಂಟೆ

* ಬೆಂಗಳೂರು–ಕೊಯಮತ್ತೂರು (22777) ಬೆಂಗಳೂರು ಮಧ್ಯಾಹ್ನ 2.15ಗಂಟೆ ರಾತ್ರಿ 9 ಗಂಟೆ

* ಪ್ರಯಾಣದ ಅವಧಿ – 6.45 ರಿಂದ 6.55ತಾಸು

**

ರೈಲ್ವೆಯಲ್ಲಿರುವ ಸೌಲಭ್ಯಗಳು

* ಡಬಲ್‌ ಡೆಕ್ಕರ್‌, ವೈ–ಫೈ ಸಂಪರ್ಕ

* ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ

* ಬೋಗಿಗಳಲ್ಲಿ ಆಹಾರ, ತಿಂಡಿ ವಿತರಿಸುವ ಸ್ವಯಂಚಾಲಿತ ಯಂತ್ರ

* ಪ್ರಯಾಣಿಕರ ಆಸನಗಳ ಎದುರು ಅಳವಡಿಸಿದ ಎಲ್‌ಸಿಡಿ ಪರದೆಯಲ್ಲಿ
ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ

* ವಿಮಾನಯಾನದ ಅನುಭವ ನೀಡುವ ಒಳಾಂಗಣ ವಿನ್ಯಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.