ADVERTISEMENT

ಮಗು ಒತ್ತೆ: ಬ್ರಿಟನ್‌ಗೆ ಭಾರತ ಮನವಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ನವದೆಹಲಿ (ಐಎಎನ್‌ಎಸ್): ಪೋಷಕರಿಂದ ಶೋಷಣೆಗೆ ಒಳಗಾದ ಶಂಕೆಯ ಮೇಲೆ ಬ್ರಿಟನ್ ಸರ್ಕಾರ ಅನಿವಾಸಿ ಭಾರತೀಯ ದಂಪತಿಯ ಐದೂವರೆ ವರ್ಷದ ಮಗುವನ್ನು ಕಿತ್ತುಕೊಂಡು ಪಾಲನಾ ಕೇಂದ್ರದ ವಶಕ್ಕೆ ಒಪ್ಪಿಸಿದ ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಹೆಚ್ಚಿನ ಮಾಹಿತಿಯನ್ನು ಕೋರಿದೆ.

ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿ ಒದಗಿಸುವಂತೆ ಬ್ರಿಟನ್‌ಗೆ ಮನವಿ ಸಲ್ಲಿಸಲಾಗಿದ್ದು ಅಗತ್ಯ ಕಂಡುಬಂದಲ್ಲಿ ರಾಜತಾಂತ್ರಿಕ ನೆರವು ಒದಗಿಸಲಾಗುವುದು'ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.