ADVERTISEMENT

ಮಧ್ಯಪ್ರದೇಶ: ಚಿತ್ರಕೂಟ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ

ಏಜೆನ್ಸೀಸ್
Published 12 ನವೆಂಬರ್ 2017, 11:29 IST
Last Updated 12 ನವೆಂಬರ್ 2017, 11:29 IST
ಭೋಪಾಲದಲ್ಲಿರುವ ಪಕ್ಷದ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು –ಪಿಟಿಐ ಚಿತ್ರ
ಭೋಪಾಲದಲ್ಲಿರುವ ಪಕ್ಷದ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು –ಪಿಟಿಐ ಚಿತ್ರ   

ಭೋಪಾಲ್: ಚಿತ್ರಕೂಟ ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಿಲಾಂಶು ಚತುರ್ವೇದಿ ಅವರು ಬಿಜೆಪಿಯ ಶಂಕರ್ ದಯಾಳ್ ತ್ರಿಪಾಠಿ ವಿರುದ್ಧ 14,333 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಚತುರ್ವೇದಿ ಒಟ್ಟು 66,810 ಮತಗಳನ್ನು ಗಳಿಸಿದ್ದರೆ, ತ್ರಿಪಾಠಿಗೆ 52,677 ಮತಗಳು ದೊರೆತಿವೆ. ನವೆಂಬರ್‌ 9ರಂದು ನಡೆದಿದ್ದ ಉಪಚುನಾವಣೆಯಲ್ಲಿ ಶೇ. 65ರಷ್ಟು ಮತದಾನವಾಗಿತ್ತು.

2013ರ ವಿಧಾನಸಭೆ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರೇಮ್‌ ಸಿಂಗ್ ಜಯಗಳಿಸಿದ್ದರು. ಅವರ ನಿಧನದಿಂದಾಗಿ ಸ್ಥಾನ ತೆರವಾಗಿತ್ತು. 2013ರ ಚುನಾವಣೆಯಲ್ಲಿ ಪ್ರೇಮ್‌ ಸಿಂಗ್ ಅವರು 10,970 ಮತಗಳ ಅಂತರದಿಂದ ಜಯಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.