ADVERTISEMENT

ಮರಣದಂಡನೆ ವಿಧಾನ ಬದಲು ಕೇಂದ್ರದ ವಿವರಣೆ ಕೇಳಿದ ‘ಸುಪ್ರೀಂ’

ಪಿಟಿಐ
Published 6 ಅಕ್ಟೋಬರ್ 2017, 20:21 IST
Last Updated 6 ಅಕ್ಟೋಬರ್ 2017, 20:21 IST
ಮರಣದಂಡನೆ ವಿಧಾನ ಬದಲು ಕೇಂದ್ರದ ವಿವರಣೆ ಕೇಳಿದ ‘ಸುಪ್ರೀಂ’
ಮರಣದಂಡನೆ ವಿಧಾನ ಬದಲು ಕೇಂದ್ರದ ವಿವರಣೆ ಕೇಳಿದ ‘ಸುಪ್ರೀಂ’   

ನವದೆಹಲಿ: ಮರಣದಂಡನೆಯನ್ನು ಗಲ್ಲಿಗೆ ಹಾಕುವ ಮೂಲಕ ಜಾರಿ ಮಾಡುವುದರ ಕಾನೂನಿನ ಮಾನ್ಯತೆ ಬಗ್ಗೆ ವಿವರಣೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಗಲ್ಲು ಹಾಕುವುದನ್ನು ಪ್ರಶ್ನಿಸಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿರುವ ಅರ್ಜಿಯಲ್ಲಿ ‘ಮರಣದಂಡನೆಯನ್ನೂ ಗೌರವಯುತವಾಗಿ ಮತ್ತು ನೋವುಂಟು ಮಾಡದ ರೀತಿಯಲ್ಲಿ ಜಾರಿ ಮಾಡಬೇಕು ಎಂದು ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಹೇಳುತ್ತದೆ’ ಎಂದು ಪ್ರತಿಪಾದಿಸಿದ್ದರು.

ಅರ್ಜಿಯ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠವು ‘ಈ ಸಂಬಂಧ ಮೂರು ವಾರಗಳ ಒಳಗೆ ನಿಮ್ಮ ವಿವರಣೆ ನೀಡಿ’ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.