ADVERTISEMENT

ಮಹತ್ವದ ಹೆಜ್ಜೆ-ಮನಮೋಹನ್

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ನವದೆಹಲಿ (ಪಿಟಿಐ): ಬಿನ್ ಲಾಡೆನ್ ಹತ್ಯೆಯಿಂದಾಗಿ ಉಗ್ರರ ವಿರುದ್ಧದ ಜಾಗತಿಕ ಹೋರಾಟ ಮಹತ್ವದ ಹೆಜ್ಜೆ ಇರಿಸಿದೆ ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್, ಅಲ್‌ಖೈದಾ ಮತ್ತಿತರ ಭಯೋತ್ಪಾದಕ ಸಂಘಟನೆಗಳಿಗೆ ಇದೊಂದು ಆಘಾತಕಾರಿ ಪ್ರಹಾರವಾಗಲಿದೆ ಎಂದಿದ್ದಾರೆ.

ಸಮಾಜದ ಶಾಂತಿಗೆ ಭಂಗ ತಂದು ಮಕ್ಕಳು, ಮಹಿಳೆಯರು ಎನ್ನದೆ ಎಲ್ಲರನ್ನೂ ಬರ್ಬರವಾಗಿ ಕೊಲ್ಲುವ ಇಂತಹ ಸಂಘಟನೆಗಳನ್ನು ಹತ್ತಿಕ್ಕಲು ಜಾಗತಿಕ ಸಮುದಾಯ, ವಿಶೇಷವಾಗಿ ಪಾಕಿಸ್ತಾನ ಯೋಜಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT