ADVERTISEMENT

ಮುಜಾಫರ್‌ನಗರ: ನವಜಾತ ಶಿಶುವನ್ನು ನಡುರಸ್ತೆಯಲ್ಲಿ ಇಟ್ಟುಹೋದ ಮಹಿಳೆ –ದೃಶ್ಯ ಸಿ.ಸಿ ಟಿ.ವಿಯಲ್ಲಿ ಸೆರೆ

ಏಜೆನ್ಸೀಸ್
Published 7 ಜೂನ್ 2018, 3:13 IST
Last Updated 7 ಜೂನ್ 2018, 3:13 IST
ಚಿತ್ರ: ಎಎನ್‌ಐ ಟ್ವೀಟ್ ವಿಡಿಯೊ ಗ್ರಾಬ್‌
ಚಿತ್ರ: ಎಎನ್‌ಐ ಟ್ವೀಟ್ ವಿಡಿಯೊ ಗ್ರಾಬ್‌   

ಮುಜಾಫರ್‌ನಗರ: ನವಜಾತ ಶಿಶುವೊಂದನ್ನು ಕಾರಿನಲ್ಲಿ ತಂದ ಮಹಿಳೆಯೊಬ್ಬರು ರಸ್ತೆಬದಿಯಲ್ಲಿ ಮನೆಯೊಂದರ ಮುಂದೆ ಇಟ್ಟು ಹೋದ ಘಟನೆ ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ.

ಗುರುತು ಸಿಗದಂತೆ ಮುಸುಕು ಧರಿಸಿದ್ದ ಮಹಿಳೆಯೊಬ್ಬರು ಬೂದು ಬಣ್ಣದ ಸ್ಯಾಂಟ್ರೊ ಕಾರಿನಲ್ಲಿ ಬಂದು ಕಾರಿನ ಕಿಟಕಿಯ ಮೂಲಕ ರಸ್ತೆ ಬದಿ ಮನೆಯೊಂದರ ಮೆಟ್ಟಿಲಿನ ಮೇಲೆ ಮಗುವೊಂದನ್ನು ಇಟ್ಟು ಹೋಗಿರುವ ಪೂರ್ಣ ದೃಶ್ಯ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದೆ. ಈ ದೃಶ್ಯದ ವಿಡಿಯೊವನ್ನು ಎಎನ್‌ಐ ಟ್ವೀಟ್‌ ಮಾಡಿದೆ. ವಿಡಿಯೊ ವೈರಲ್‌ ಆಗಿದೆ.

ಮಗುವನ್ನು ರಕ್ಷಿಸಲಾಗಿದೆ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಗು ಚೇತರಿಸಿಕೊಳ್ಳಲಿದೆ ಎಂಬ ಭರವಸೆ ಹೊಂದಿದ್ದೇವೆ ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ.

ADVERTISEMENT

ಇದೇ ಮಾದರಿಯ ಘಟನೆಯೊಂದು ಭಾನುವಾರ ಕೇರಳದಲ್ಲಿ ವರದಿಯಾಗಿತ್ತು. ಐದು ದಿನದ ನವಜಾತ ಶಿಶುವನ್ನು ಬೀದಿ ಬದಿ ಬಿಟ್ಟು ಹೋಗಲಾಗಿತ್ತು. ದಂಪತಿಗೆ ನಾಲ್ಕನೇ ಮಗು ಕೂಡಾ ಹೆಣ್ಣಾಗಿತ್ತು, ಇದರಿಂದ ಅವರು ಸಮಾಜದಲ್ಲಿನ ನಿಂದನೆ ಭೀತಿಯಿಂದ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ದಂಪತಿಯನ್ನು ಬಂಧಿಸಲಾಗಿದೆ ಎಂದು ಎನ್‌ಡಿ ಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.