ADVERTISEMENT

ಮೂತ್ರ ಕುಡಿಸಿದ ಪೊಲೀಸ್ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 19:30 IST
Last Updated 11 ಆಗಸ್ಟ್ 2012, 19:30 IST

ಶಿಲ್ಲಾಂಗ್ (ಐಎಎನ್‌ಎಸ್): ಪೊಲೀಸ್ ಅಧಿಕಾರಿಯೊಬ್ಬ ತನ್ನ ಇಬ್ಬರು ಸಹ ತರಬೇತುದಾರರಿಗೆ ಮೂತ್ರ ಕುಡಿಸಿದ್ದು, ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಿದ ಘಟನೆ ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದೆ.

ಮೇಘಾಲಯ ಪೊಲೀಸ್‌ನ 2ನೇ ತುಕಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಿದೀಪ್ ಭೋರಾ ಇಬ್ಬರು ಸಹತರಬೇತುದಾರರಿಗೆ ಒತ್ತಾಯದಿಂದ ಮೂತ್ರ ಕುಡಿಸಿದ್ದಾನೆ. ಈ ಕುರಿತು ವಿಚಾರಣೆ ನಡೆಸಲಾಗುತ್ತಿದ್ದು, ಆಪಾದನೆ ಸತ್ಯ ಎಂದು ತಿಳಿದುಬಂದರೆ ಆತನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ಮಾಧ್ಯಮದವರಿಗೆ ತಿಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.