ADVERTISEMENT

ರಾಜರಾಮ್ ಮೋಹನ್ ರಾಯ್‌ಗೆ ಡೂಡಲ್ ಗೌರವ

ಬ್ರಹ್ಮ ಸಮಾಜದ ಸ್ಥಾಪಕ

ಏಜೆನ್ಸೀಸ್
Published 22 ಮೇ 2018, 7:37 IST
Last Updated 22 ಮೇ 2018, 7:37 IST
ರಾಜರಾಮ್ ಮೋಹನ್ ರಾಯ್‌ಗೆ ಡೂಡಲ್ ಗೌರವ
ರಾಜರಾಮ್ ಮೋಹನ್ ರಾಯ್‌ಗೆ ಡೂಡಲ್ ಗೌರವ   

ನವದೆಹಲಿ: ಬ್ರಹ್ಮ ಸಮಾಜದ ಸ್ಥಾಪಕ ರಾಜರಾಮ್ ಮೋಹನ್ ರಾಯ್ ಅವರ 246ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.

ನವ ಭಾರತದ ಪ್ರವಾದಿ ಎಂದು ಖ್ಯಾತರಾದ ರಾಯ್ ಅವರ ಡೂಡಲ್ ಚಿತ್ರ ಬೀನಾ ಮಿಸ್ತ್ರೀ ಅವರ ಕೈ ಚಳಕದಲ್ಲಿ ಮೂಡಿಬಂದಿದೆ

ಸಮಾಜ ಸುಧಾರಕ ಮೋಹನ್ ರಾಯ್ ಅವರು 1772, ಮೇ 22 ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರಾಧಾನಗರದಲ್ಲಿ ಜನಿಸಿದರು. ತಂದೆ ರಾಮ್‌ಕಾಂತ, ತಾಯಿ ತಾರಿಣಿದೇವಿ.

ADVERTISEMENT

ಹಿಂದೂ ಧರ್ಮದ ಮಹಿಳೆಯರನ್ನು ಪೆಡಂಭೂತವಾಗಿ ಕಾಡುತ್ತಿದ್ದ ಸತಿ ಸಹಗಮನ ಪದ್ಧತಿ ತೊಡೆದುಹಾಕುವಲ್ಲಿ ರಾಯ್ ಅವರ ಕೊಡುಗೆ ಅಪಾರವಾದುದು. ಇದರ ಜತೆಗೆ  ಬಾಲ್ಯವಿವಾಹ, ಜಾತಿ ಪದ್ಧತಿ ನಿರ್ಮೂಲನೆ ಹಾಗೂ ಮಹಿಳಾ ಸಮಾನತೆ, ಮಹಿಳೆಯರಿಗೂ ಆಸ್ತಿ ಹಕ್ಕು ತಂದುಕೊಡುವಲ್ಲಿ ಸತತ ಪ್ರಯತ್ನಿಸಿದರು.

1828ರಲ್ಲಿ ಬ್ರಹ್ಮ ಸಮಾಜವನ್ನು ಸ್ಥಾಪಿಸಿದ ಇವರು ಸಮಾಜಿಕ–ಧಾರ್ಮಿಕ ಚಳುವಳಿ ಮೂಲಕ ಸಮಾಜದಲ್ಲಿ ಆಧುನಿಕ ಚಿಂತನೆಗಳನ್ನು ಬಿತ್ತಲು ಯತ್ನಿಸಿದರು.

ಇವರು 1833, ಸೆಪ್ಟೆಂಬರ್ 27ರಂದು 61ನೇ ವಯಸ್ಸಿನಲ್ಲಿ ಇಂಗ್ಲೆಂಡಿನ ಬ್ರಿಸ್ಟೋಲ್‌ನಲ್ಲಿ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.