ADVERTISEMENT

ರಾಜ್ಯದಲ್ಲಿ ಮಿತ್ತಲ್ ಉಕ್ಕುಘಟಕ: ಭೂಸ್ವಾಧೀನ ಪ್ರಕ್ರಿಯೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 13:00 IST
Last Updated 26 ಫೆಬ್ರುವರಿ 2012, 13:00 IST

ನವದೆಹಲಿ (ಪಿಟಿಐ): ಕರ್ನಾಟಕದಲ್ಲಿ 60 ಲಕ್ಷ ಟನ್ ಸಾಮರ್ಥ್ಯದ ಪ್ರಸ್ತಾಪಿತ ಉಕ್ಕು ಘಟಕಕ್ಕಾಗಿ 1,827 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ವಿಶ್ವದ  ಅತಿದೊಡ್ಡ ಉಕ್ಕು ಉತ್ಪಾದಕ ಸಂಸ್ಥೆ ಆರ್ಸೆಲರ್- ಮಿತ್ತಲ್ ಭಾರತದಲ್ಲಿ ಉಕ್ಕು ಕೈಗಾರಿಕೆ ಬೆಳವಣಿಗೆ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ.

 ಕರ್ನಾಟಕದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಲಾಗಿದ್ದು, 30,000 ಕೋಟಿ ರೂಪಾಯಿ ವೆಚ್ಚದ ಯೋಜನೆಗಾಗಿ  ಬಾಕಿ 972 ಎಕರೆ ಪ್ರದೇಶವನ್ನು ಮೇ ವೇಳೆಗೆ ಸ್ವಾಧೀನ ಪಡಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಕಂಪೆನಿಯು ತನ್ನ 2011ರ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಪ್ರಸ್ತಾವಿತ ಉಕ್ಕು ಘಟಕಕ್ಕಾಗಿ ಕರಡು ಕಾರ್ಯಸಾಧ್ಯತಾ ವರದಿಯನ್ನು ಸಧ್ಯ ತಯಾರಿಸಲಾಗುತ್ತಿದ್ದು ನೀರು ಮತ್ತು ಪರಿಸರ ಮೇಲಿನ ಪರಿಣಾಮದ ಅಂದಾಜು ಅಧ್ಯಯನ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಉಕ್ಕು ಘಟಕದ ಜೊತೆಗೇ ಕರ್ನಾಟಕದಲ್ಲಿ 750 ಮೆ.ವಾ. ಸಾಮರ್ಥ್ಯ ವಿದ್ಯುತ್ ಸಂಗ್ರಹ ಘಟಕ ಸ್ಥಾಪಿಸಲೂ ಆರ್ಸೆಲರ್- ಮಿತ್ತಲ್ ಉದ್ದೇಶಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.