ADVERTISEMENT

ರಾಹುಲ್‌ಗೆ ಬಿಜೆಪಿಯ ನಾಯಕಿಯರೆಂದರೆ ಭಯ: ಷಹನವಾಜ್‌ ಹುಸೇನ್‌

ಪಿಟಿಐ
Published 11 ಅಕ್ಟೋಬರ್ 2017, 11:26 IST
Last Updated 11 ಅಕ್ಟೋಬರ್ 2017, 11:26 IST
ರಾಹುಲ್‌ಗೆ ಬಿಜೆಪಿಯ ನಾಯಕಿಯರೆಂದರೆ ಭಯ: ಷಹನವಾಜ್‌ ಹುಸೇನ್‌
ರಾಹುಲ್‌ಗೆ ಬಿಜೆಪಿಯ ನಾಯಕಿಯರೆಂದರೆ ಭಯ: ಷಹನವಾಜ್‌ ಹುಸೇನ್‌   

ಬಲಿಯಾ (ಉತ್ತರ ಪ್ರದೇಶ) : ಆರ್‌ಎಸ್‌ಎಸ್‌ನಲ್ಲಿ ಎಷ್ಟು ಮಹಿಳೆಯರಿದ್ದಾರೆ ಎಂದು ಕೇಳಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಮುಖಂಡ ಷಹನವಾಜ್‌ ಹುಸೇನ್‌, ರಾಹುಲ್‌ ಅವರು ಬಿಜೆಪಿಯ ಮಹಿಳಾ ಮುಖಂಡರ ಬಗ್ಗೆ ಭಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

‘ಬಿಜೆಪಿಯಲ್ಲಿ ಮಹಿಳೆಗೆ ಹೆಚ್ಚಿನ ಗೌರವವಿದೆ. ಉತ್ತರ ಪ್ರದೇಶದಲ್ಲಿ ಪಕ್ಷವು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕಿಯರನ್ನು ಹೊಂದಿದೆ’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳನ್ನು ಅರ್ಥ ಮಾಡಿಕೊಳ್ಳಲು ರಾಹುಲ್‌ ಗಾಂಧಿ ಅವರು ಇನ್ನಷ್ಟು ಸಮಯ ತೆಗೆದುಕೊಳ್ಳಬೇಕು. ಅದಕ್ಕಾಗಿ ಅವರು ಅಧ್ಯಯನ ನಡೆಸಬೇಕು’ ಎಂದು ಹುಸೇನ್‌ ಹೇಳಿದ್ದಾರೆ.

ADVERTISEMENT

ವಡೋದರಾದಲ್ಲಿ ಮಂಗಳವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಬಿಜೆಪಿಯ ಸಂಘಟನೆಯಾದ ಆರ್‌ಎಸ್‌ಎಸ್‌ನಲ್ಲಿ ಎಷ್ಟು ಮಹಿಳೆಯರಿದ್ದಾರೆ? ಚೆಡ್ಡಿ ಹಾಕಿಕೊಂಡು ಶಾಖೆಗಳಲ್ಲಿ ಭಾಗವಹಿಸುವ ಮಹಿಳೆಯರನ್ನು ನೀವು ಯಾರಾದರೂ ನೋಡಿದ್ದೀರಾ? ನಾನು ನೋಡಿಲ್ಲ’ ಎಂದು ಹೇಳಿದ್ದರು.

ಕಾಂಗ್ರೆಸ್‌ ಮುಖಂಡ ಬಳಸಿರುವ ಭಾಷೆ ‘ದುರದೃಷ್ಟಕರ’ವಾದುದು ಎಂದು ಹೇಳಿರುವ ಷಹನವಾಜ್‌ ಹುಸೇನ್‌, ಅವರು ಎಲ್ಲ ಮಿತಿಗಳನ್ನೂ ಮೀರಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.