ADVERTISEMENT

ರೈಲ್ವೆ ಸಿಬ್ಬಂದಿಗೆ ನೂತನ ಸಮವಸ್ತ್ರ

ಪಿಟಿಐ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ರೈಲ್ವೆ ಸಿಬ್ಬಂದಿಗೆ ನೂತನ ಸಮವಸ್ತ್ರ
ರೈಲ್ವೆ ಸಿಬ್ಬಂದಿಗೆ ನೂತನ ಸಮವಸ್ತ್ರ   

ನವದೆಹಲಿ:  ರೈಲ್ವೆ ಇಲಾಖೆಯ ಕಚೇರಿ ಸಿಬ್ಬಂದಿ, ಟಿ.ಟಿ, ಭದ್ರತಾ ಸಿಬ್ಬಂದಿ,  ಚಾಲಕರು, ಕ್ಯಾಟರಿಂಗ್‌ ಸಿಬ್ಬಂದಿ ಸೇರಿದಂತೆ ಇಲಾಖೆಯ ಐದು ಲಕ್ಷ ನೌಕರರಿಗೆ ನೂತನ ವಿನ್ಯಾಸದ ಸಮವಸ್ತ್ರ ಬರುವ ಅಕ್ಟೋಬರ್‌ನಲ್ಲಿ ಕೈಸೇರಲಿದೆ.

ಭಾರತೀಯ ರೈಲ್ವೆ ಲೋಗೊ ಇರುವ   ಸಮವಸ್ತ್ರಗಳನ್ನು ಖ್ಯಾತ ವಸ್ತ್ರ ವಿನ್ಯಾಸಕಿ ರಿತು ಬೇರಿ  ವಿನ್ಯಾಸಗೊಳಿಸಿದ್ದಾರೆ. ಅರ್ಧ ಮತ್ತು ಉದ್ದನೆಯ ತೋಳಿನ ಕಪ್ಪು–ಹಳದಿ ಬಣ್ಣದ ಟೀ–ಷರ್ಟ್‌ ಅನ್ನು  ಮುಖ್ಯ ಕಚೇರಿ ಸಿಬ್ಬಂದಿಗೆ, ಕಪ್ಪು–ಬಿಳುಪು ಬಣ್ಣದ ಟೀ–ಷರ್ಟ್‌ ಅನ್ನು ಕೇಟರಿಂಗ್‌ ಸಿಬ್ಬಂದಿಗೆ,  ಹಳದಿ–ಹಸಿರು ಬಣ್ಣದ ಅರ್ಧ ಹೊಳೆಯುವ ಜಾಕೆಟ್‌ ಟಿಟಿಇ, ಭದ್ರತಾ ಸಿಬ್ಬಂದಿ ಮತ್ತು ಚಾಲಕರಿಗಾಗಿ ತಯಾರಾಗಿದೆ.

‘ಸದ್ಯ ಇವರೆಲ್ಲರಿಗೂ ತೀರಾ ಹಳೆಯ ಸಮವಸ್ತ್ರ ಇದ್ದು, ಅದನ್ನೀಗ ಬದಲಾಯಿಸಲಾಗುತ್ತದೆ’ ಎಂದು  ರೈಲ್ವೆ ಸಚಿವ ಸುರೇಶ್‌ ಪ್ರಭು  ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.