ADVERTISEMENT

ರೈಲ್ವೆ : 65,000 ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ರೈಲ್ವೆ : 65,000 ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿ
ರೈಲ್ವೆ : 65,000 ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿ   

ನವದೆಹಲಿ: ಖಾಲಿ ಇರುವ 90,000 ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ಅರ್ಜಿ ಆಹ್ವಾನಿಸಿರುವ ರೈಲ್ವೆ ಇಲಾಖೆಯು, ಅಭ್ಯರ್ಥಿಗಳ ಕನಿಷ್ಠ ವಿದ್ಯಾರ್ಹತೆಯನ್ನೂ ಪರಿಷ್ಕರಿಸಿದ್ದು, 65,000 ಹುದ್ದೆಗಳಿಗೆ 10ನೇ ತರಗತಿ (ಎಸ್ಸೆಸ್ಸೆಲ್ಸಿ) ಉತ್ತೀರ್ಣರಾದವರು ಅರ್ಜಿ ಸಲ್ಲಿಸ
ಬಹುದು ಎಂದು ತಿಳಿಸಿದೆ.

ಈ ಮೊದಲು 10ನೇ ತರಗತಿಯ ಜೊತೆಗೆ ಐಟಿಐ ಅಥವಾ ತತ್ಸಮಾನ ವಿದ್ಯಾರ್ಹತೆ ಇರುವವರು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದ ಇಲಾಖೆ, ಕಡ್ಡಾಯವಾಗಿ ತಾಂತ್ರಿಕ ಶಿಕ್ಷಣದ ಅರ್ಹತೆಯನ್ನು ಹೊರತುಪಡಿಸಿದ 65,000 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ 10ನೇ ತರಗತಿ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ.

‘ಸಿ’ ವರ್ಗದ ಲೆವೆಲ್ 1ರ ಅಡಿ ಇರುವ ಟ್ರ್ಯಾಕ್‌ ಮೆಂಟೇನರ್ಸ್‌, ಪಾಯಿಂಟ್ಸ್‌ ಮೆನ್‌, ಹೆಲ್ಪರ್ಸ್‌, ಗೇಟ್‌ಮೆನ್‌, ಪೋರ್ಟರ್ಸ್‌ ಮತ್ತಿತರ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾದವರೆಲ್ಲ ಅರ್ಜಿ ಸಲ್ಲಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.