ADVERTISEMENT

ರೋಮಿಂಗ್: ಸರ್ಕಾರದ ತರಾಟೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ನವದೆಹಲಿ (ಪಿಟಿಐ): 3ಜಿ ರೋಮಿಂಗ್‌ಗೆ ಸಂಬಂಧಿಸಿದಂತೆ ದೂರಸಂಪರ್ಕ ನಿರ್ವಾಹಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸರ್ಕಾರ, ಮೊಬೈಲ್ ಸೇವಾ ಸಂಸ್ಥೆಗಳು ಶುದ್ಧ ಹಸ್ತವಾಗಿ ಬರುವುದಿಲ್ಲ ಮತ್ತು ದೂರಸಂಪರ್ಕ ನ್ಯಾಯಮಂಡಳಿ ಟಿಡಿಎಸ್‌ಎಟಿ ಮುಂದೆ ದಾಖಲೆಗಳನ್ನು ಮುಚ್ಚಿಟ್ಟಿವೆ ಎಂದು ಆರೋಪಿಸಿದೆ.

ತಕ್ಷಣವೇ 3ಜಿ ರೋಮಿಂಗ್ ಸ್ಥಗಿತಗೊಳಿಸುವಂತೆ ನೀಡಿದ್ದ ಆದೇಶ ಪ್ರಶ್ನಿಸಿ ದೂರಸಂಪರ್ಕ ನಿರ್ವಾಹಕರು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾ ಮಾಡುವಂತೆಯೂ ಟಿಡಿಎಸ್‌ಎಟಿ ಮುಂದೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ದೂರಸಂಪರ್ಕ ಇಲಾಖೆ ಮನವಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.