ADVERTISEMENT

ವಾನರ ಸಂರಕ್ಷಣೆ ತುರ್ತು ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಹೈದರಾಬಾದ್ (ಪಿಟಿಐ): `ದೈಹಿಕ ರಚನೆಯಲ್ಲಿ ಮನುಷ್ಯನಿಗೆ ಹತ್ತಿರವಾಗಿರುವ ಅಳಿವಿನಂಚಿನಲ್ಲಿರುವ ಚಿಂಪಾಂಜಿ, ಕೋತಿ, ಲೆಮೂರ್ ಸೇರಿದಂತೆ ಇತರೇ ವಾನರ ಪ್ರಭೇದಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ~ ಎಂದು ಇಲ್ಲಿ ನಡೆದ ವಿಶ್ವಸಂಸ್ಥೆಯ `11ನೇ ಜೀವ ವೈವಿಧ್ಯ ಮಹಾ ಸಮ್ಮೇಳನ~ದಲ್ಲಿ ವಾನರರ ಕುರಿತು ಬಿಡುಗಡೆಯಾದ ವರದಿ ಹೇಳಿದೆ.

`ಪ್ರೈಮೇಟ್ಸ್ ಇನ್ ಪೆರಿಲ್: ದಿ ವಲ್ಡ್ಸ್  25 ಮೋಸ್ಟ್ ಎಂಡೆಂಜರ್ಡ್‌ ಪ್ರೈಮೇಟ್ಸ್~ ವರದಿಯಲ್ಲಿ 25 ವಾನರ ಪ್ರಭೇದಗಳು ಅಳಿವಿನ ಅಂಚಿಗೆ ಸಿಲುಕಿವೆ ಎಂದು ಹೇಳಾಗಿದೆ. ಏಷ್ಯಾದ ಒಂಬತ್ತು, ಮಡಗಾಸ್ಕರ್‌ನ ಆರು, ಆಫ್ರಿಕಾ ಹಾಗೂ ಅಮೆರಿಕದ ನವ ಉಷ್ಣವಲಯದಲ್ಲಿ ಐದು ವಾನರ ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.