ADVERTISEMENT

‘ವಾರ್ದಾ’ ಚಂಡಮಾರುತಕ್ಕೆ ಎರಡು ಬಲಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2016, 10:06 IST
Last Updated 12 ಡಿಸೆಂಬರ್ 2016, 10:06 IST
‘ವಾರ್ದಾ’ ಚಂಡಮಾರುತಕ್ಕೆ ಎರಡು ಬಲಿ
‘ವಾರ್ದಾ’ ಚಂಡಮಾರುತಕ್ಕೆ ಎರಡು ಬಲಿ   

ಚೆನ್ನೈ: ತಮಿಳುನಾಡಿನ ಉತ್ತರ ಭಾಗ ಹಾಗೂ ದಕ್ಷಿಣ ಆಂಧ್ರದಲ್ಲಿ ಅಪ್ಪಳಿಸಿದ ‘ವಾರ್ದಾ’ ಚಂಡಮಾರುತಕ್ಕೆ ಇಬ್ಬರು ಬಲಿಯಾಗಿದ್ದಾರೆಂದು ತಮಿಳುನಾಡು ಸರ್ಕಾರ ಅಧೀಕೃತವಾಗಿ ಘೋಷಿಸಿದೆ.

ಭಾರೀ ಮಳೆ ಮತ್ತು ಬಿರುಗಾಳಿಗೆ   ಮರಗಳು ಹಾಗೂ  ವಿದ್ಯುತ್‌ ಕಂಬಗಳು  ನೆಲಕ್ಕುರುಳಿವೆ.

ಮಳೆ ಹೆಚ್ಚಿರುವ ಪ್ರದೇಶಗಳಲ್ಲಿ  ಜನರಿಗೆ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಲಾಗಿದೆ.  ಬಹುತೇಕ ಕಡೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು ವಾಹನಗಳ ದಟ್ಟಣೆಯಿಂದ  ಟ್ರಾಫಿಕ್‌ ಜಾಮ್‌ ಆಗಿ ವಾಹನ ಸವಾರರು ಪರದಾಡುವಂತಾಗಿದೆ. ಕೆಲವೊಂದು ರಸ್ತೆಗಳಲ್ಲಿ ಏಕಮಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಹಾಬಲಿಪುರಂನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ಮನೆಗಳ ಮೇಲ್ಛಾವಣಿಗಳು ಗಾಳಿಗೆ ಹಾರಿ ಹೋಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.