ADVERTISEMENT

ವ್ಯಂಗಚಿತ್ರಕಾರ ಮಂಗೇಶ್‌ ನಿಧನ

ಪಿಟಿಐ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ವ್ಯಂಗಚಿತ್ರಕಾರ  ಮಂಗೇಶ್‌ ನಿಧನ
ವ್ಯಂಗಚಿತ್ರಕಾರ ಮಂಗೇಶ್‌ ನಿಧನ   

ಪುಣೆ: ವ್ಯಂಗ್ಯಚಿತ್ರಕಾರ  ಮತ್ತು ಲೇಖಕ ಮಂಗೇಶ್‌ ತೆಂಡೂಲ್ಕರ್‌ (82) ಅನಾರೋಗ್ಯದಿಂದ ಇಲ್ಲಿನ  ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ಇವರು ನಾಟಕ ರಚನಕಾರರಾದ ದಿವಂಗತ ವಿಜಯ್‌ ತೆಂಡೂಲ್ಕರ್‌ ಅವರ ಸಹೋದರ.

ಸಂಚಾರ ದಟ್ಟಣೆ ಸೇರಿದಂತೆ ತಮ್ಮ ಚಿತ್ರಗಳ ಮೂಲಕ ಮಂಗೇಶ್‌ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದರು. ಆಗಾಗ ರಸ್ತೆಯಲ್ಲಿ ನಿಂತು, ಸಂಚಾರ ನಿಯಮಗಳ ಸಂದೇಶವಿರುವ ಪೋಸ್ಟ್‌್ ಕಾರ್ಡ್‌ಗಳನ್ನು ಸಾರ್ವಜನಿಕರಿಗೆ ಹಂಚುತ್ತಿದ್ದರು. ‘ಭೂಯಿಚಕ್ರ’, 53 ಲೇಖನಗಳು ಮತ್ತು ವ್ಯಂಗ್ಯಚಿತ್ರಗಳನ್ನು ಒಳಗೊಂಡ ‘ಸಂಡೇ ಮೂಡ್‌’ ಸೇರಿದಂತೆ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಹಲವಾರು ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಅವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.