ADVERTISEMENT

ಶಂಕಿತ ಎಲ್‌ಇಟಿ ಉಗ್ರನ ಬಂಧನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST

ನವದೆಹಲಿ (ಐಎಎನ್ಎಸ್‌): ಲಷ್ಕರ್‌–ಎ–ತೈಯಬಾ(ಎಲ್‌ಇಟಿ) ಸಂಘಟನೆಯಿಂದ ತರಬೇತಿ ಪಡೆದ ಶಂಕಿತ ಉಗ್ರನನ್ನು ಹರಿಯಾಣದಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಬಂಧಿತನನ್ನು ಮೊಹ್ಮದ್‌ ಶಾಹೀದ್‌ (32) ಎಂದು ಗುರುತಿಸಲಾಗಿದೆ. ಹರಿಯಾಣದ ಮೇವತ್‌ ಪ್ರಾಂತ್ಯದ ನೂಹ್ ಜಿಲ್ಲೆಯ ಛೋಟಿ ಮೇವ್ಲಿ ನಿವಾಸಿಯಾಗಿದ್ದ ಈತನನ್ನು ಆತನ ಮನೆಯಲ್ಲೇ ಡಿಸೆಂಬರ್ 10ರಂದು ಬಂಧಿಸಲಾಗಿದೆ. ಎಲ್ಇಟಿ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಶಾಹೀದ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು  ಮಾಹಿತಿ ನೀಡಿದ್ದಾರೆ.

ಶಾಹೀದ್ ಎಲ್ಐಟಿ ಮುಖ್ಯಸ್ಥ ಜಾವೇದ್ ಬಲೂಚಿ ಎಂಬಾತನೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಪಾಕ್‌ ಮೂಲದ ಬಲೂಚಿಯೊಂದಿಗೆ ನಡೆಸಿದ ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಬಂಧಿತ ಮೊಹಮ್ಮದ್‌ ಶಹೀದ್‌ನನ್ನು ಡಿಸೆಂಬರ್‌ 21ರ ತನಕ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.