ADVERTISEMENT

ಶಿವರಾತ್ರಿ: ಲಿಂಗರಾಜ ದೇಗುಲದಲ್ಲಿ ಲಕ್ಷ ಭಕ್ತರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಭುವನೇಶ್ವರ (ಐಎಎನ್‌ಎಸ್): ಶಿವರಾತ್ರಿ ಪ್ರಯುಕ್ತ ಇಲ್ಲಿನ ಐತಿಹಾಸಿಕ ಲಿಂಗರಾಜ ದೇವಸ್ಥಾನದಲ್ಲಿ ಸೋಮವಾರ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿದ್ದರು. ಉತ್ಸವದ ಪ್ರಯುಕ್ತ ಒಡಿಶಾ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಉಪವಾಸ ವ್ರತ ಆಚರಣೆ ಮಾಡಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರ ಉದ್ದನೆಯ ಸಾಲುಗಳು ಕಂಡು ಬಂದವು ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

11ನೇ ಶತಮಾನ ಲಿಂಗರಾಜ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಎರಡು ಕಿ.ಮೀ  ಉದ್ದದವರೆಗೆ ಭಕ್ತರು ಸಾಲುಗಟ್ಟಲೇ ನಿಂತಿದ್ದರು.

ಯಾವುದೇ ಅಹಿತಕರ ಘಟನೆ ಸಂಬಂಧಿಸದೇ ಇರದಂತೆ ನೋಡಿಕೊಳ್ಳಲು ದೇವಾಲಯ ಸುತ್ತಲೂ 200 ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದರು.

ಭದ್ರಕ್ ಜಿಲ್ಲೆಯ ಅರಡಿ ದೇವಸ್ಥಾನದಲ್ಲಿ  ಮಹಿಳೆಯರು ಸೇರಿ ಸುಮಾರು 50 ಸಾವಿರ ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ಪುರಿಯ ಲೋಕನಾಥ ದೇವಸ್ಥಾನವೂ ಭಕ್ತರಿಂದ ತುಂಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.