ಮುಂಬೈ (ಪಿಟಿಐ): ವಾಹನ ಚಾಲನೆ ಮತ್ತು ವ್ಯವಸ್ಥಿತ ಸಂಚಾರಕ್ಕೆ ಮುಂಬೈ ದೇಶದಲ್ಲೇ ಸುರಕ್ಷಿತ ಮಹಾನಗರ ಎಂದು ಖಾಸಗಿ ಕಂಪೆನಿ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.
ಖಾಸಗಿ ವಿಮೆ ಕಂಪೆನಿ ಐಸಿಐಸಿಐ ಲೊಂಬಾರ್ಡ್, ದೇಶದ ಪ್ರಮುಖ ಮಹಾನಗರಗಳಾದ ನವದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಕೋಲ್ಕತ್ತದಲ್ಲಿ 987 ಮಾದರಿಗಳನ್ನು ಸಂಗ್ರಹಿಸಿ ಈ ಸಮೀಕ್ಷೆ ಕೈಗೊಂಡಿತ್ತು.‘ಸುರಕ್ಷಿತ ವಾಹನ ಚಾಲನೆ ಹಾಗೂ ಶಿಸ್ತುಬದ್ಧ ಸಂಚಾರಕ್ಕೆ ಮುಂಬೈ ಮಹಾನಗರ ಸೂಕ್ತ ಎಂಬುದಾಗಿ ಹೆಚ್ಚಿನ ಜನ ಅಭಿಪ್ರಾಯಪಟ್ಟಿದ್ದಾರೆ’ ಎಂದು ಐಸಿಐಸಿಐ ಲೊಂಬಾರ್ಡ್ ಮುಖ್ಯಸ್ಥ ಸಂಜಯ್ ದತ್ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ದೆಹಲಿ ಅತ್ಯುತ್ತಮವಾದ ರಸ್ತೆಗಳನ್ನು ಹೊಂದಿದ್ದರೆ, ಬೆಂಗಳೂರು ಅತ್ಯುತ್ತಮ ವಾಹನ ಚಾಲನೆ ಸೌಲಭ್ಯದ ಜೊತೆಗೆ ಪೂರಕವಾದ ಪಾದಚಾರಿ ಮಾರ್ಗ, ತುರ್ತು ಅಂಬುಲೆನ್ಸ್ ಸೇವೆ ಸೇರಿದಂತೆ ಇನ್ನಿತರ ಸೇವೆಗಳನ್ನು ಹೊಂದಿರುವುದಾಗಿ ಜನ ಅಭಿಪ್ರಾಯ ಪಟ್ಟಿದ್ದಾಗಿ ಹೇಳಿದ್ದಾರೆ. ದಂಡದ ಮೊತ್ತದ ಹೆಚ್ಚಿಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸಬಹುದು ಎಂದು ಶೇ 19ರಷ್ಟು ಮಂದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.