ADVERTISEMENT

ಸರಕು ಸಾಗಣೆ ವಾಹನ ಮುಷ್ಕರ ಜೂನ್ 18ರಿಂದ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST

ಬೆಂಗಳೂರು: ವಾಹನಗಳ ವಿಮೆ ಕಂತು ಹಾಗೂ ಡೀಸೆಲ್‌ ದರ ಏರಿಕೆ ಮಾಡಿರುವುದನ್ನು ಖಂಡಿಸಿ ‘ಅಖಿಲ ಭಾರತೀಯ ಸರಕು ಸಾಗಣೆ ವಾಹನಗಳ ಮಾಲೀಕರ ಒಕ್ಕೂಟ’ ರಾಷ್ಟ್ರದಾದ್ಯಂತ ಜೂನ್‌ 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ, ‘ಏಪ್ರಿಲ್ 7ರಿಂದಲೇ ಮುಷ್ಕರ ನಡೆಸಬೇಕಿತ್ತು. ಆದರೆ, ವಿಮಾ ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎ) ಮಾತುಕತೆಗೆ ಆಹ್ವಾನಿಸಿತ್ತು. ಬೇಡಿಕೆ ಈಡೇರಿಸಲು ಪ್ರಾಧಿಕಾರದ ಅಧಿಕಾರಿ ಗಳು ನಿರಾಕರಿಸಿದರು. ಹೀಗಾಗಿ, ಮುಷ್ಕರಕ್ಕೆ ದಿನಾಂಕ ನಿಗದಿಪಡಿಸಿದ್ದೇವೆ. ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಕೈಬಿಡುವುದಿಲ್ಲ’ ಎಂದರು.

‘ಜೂನ್ 17ರ ರಾತ್ರಿ 12 ಗಂಟೆ ಯಿಂದ ವಾಹನಗಳ ಸಂಚಾರ ಬಂದ್‌ ಮಾಡಲಿದ್ದೇವೆ. ಹಾಲು, ಹಣ್ಣು, ತರ ಕಾರಿ, ಪಡಿತರ, ಇಂಧನ ಸಾಗಣೆಗೆ ತೊಂದರೆ ಆಗಬಹುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.