ADVERTISEMENT

ಸೀತೆಯನ್ನು ಅಪಹರಿಸಿದ್ದು ರಾಮ!

ಗುಜರಾತ್‌: 12ನೇ ತರಗತಿ ಪಠ್ಯದಲ್ಲಿ ನುಸುಳಿದ ತಪ್ಪು

ಪಿಟಿಐ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಅಹಮದಾಬಾದ್: ರಾಮ ಸೀತೆಯನ್ನು ಅಪಹರಿಸಿದ್ದ ಎಂಬ ವಿಷಯ 12ನೇ ತರಗತಿಯ ಪಠ್ಯಪುಸ್ತಕದಲ್ಲಿದ್ದು, ಇದು ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ಮುಜುಗರವನ್ನುಂಟು ಮಾಡಿದೆ.

ಗುಜರಾತ್‌ನ ಶಿಕ್ಷಣ ಮಂಡಳಿ ಮುದ್ರಿಸಿರುವ 12ನೇ ತರಗತಿಯ ‘ಸಂಸ್ಕೃತ ಸಾಹಿತ್ಯ ಪರಿಚಯ’ ಎಂಬ ಇಂಗ್ಲಿಷ್‌ ಪುಸ್ತಕದಲ್ಲಿ ‘ರಾವಣ ಸೀತೆಯನ್ನು ಅಪಹರಿಸಿದ್ದ’ ಎಂದು ಬರೆಯುವ ಬದಲು ರಾಮನೇ ಸೀತೆಯನ್ನು ಅಪಹರಿಸಿದ್ದ ಎಂದು ಬರೆಯಲಾಗಿದೆ.

ಅನುವಾದ ಮಾಡುವಾಗ ಈ ರೀತಿಯ ಲೋಪ ಆಗಿದೆ ಎಂದು ತಿಳಿಸಿರುವ ಶಿಕ್ಷಣ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ನಿತಿನ್ ಪಠಾನಿ, ಈ ತಪ್ಪುಗಳನ್ನು ಸರಿಪಡಿಸಲಾಗುವುದು ಎಂದರು.

ADVERTISEMENT

‘ಸೀತೆ ಪ್ರಣಾಳ ಶಿಶು’

ನಾರದ ಈ ಜಗತ್ತಿನ ಮೊದಲ ಪತ್ರಕರ್ತ ಎಂದು ಗುರುವಾರ ಹೇಳಿದ್ದ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಅವರು, ಸೀತೆ ಪ್ರಣಾಳ ಶಿಶು ಎಂದು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪ್ರಣಾಳ ಶಿಶು ಪರಿಕಲ್ಪನೆ ಹೊಸದೇನೂ ಅಲ್ಲ, ಪ್ರಾಚೀನ ಕಾಲದಲ್ಲಿಯೇ ಅದು ಇತ್ತು. ಸೀತಾದೇವಿಯೇ ಅದಕ್ಕೆ ಉದಾಹರಣೆ ಎಂದಿದ್ದಾರೆ.

‘ಸೀತೆ ಮಣ್ಣಿನ ಮಡಕೆಯಲ್ಲಿ ಹುಟ್ಟಿದವಳು ಎಂದು ಹೇಳಲಾಗುತ್ತದೆ. ಜನಕರಾಜ ಉಳುತ್ತಿದ್ದಾಗ ಮಣ್ಣಿನ ಮಡಕೆಯೊಂದು ದೊರೆಯುತ್ತದೆ. ಅದರೊಳ
ಗಿನಿಂದ ಸೀತಾದೇವಿ ಹೊರಗೆ ಬರುತ್ತಾಳೆ’ ಎಂದು ಶರ್ಮಾ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.