ADVERTISEMENT

ಸೋಳಂಕಿ ವಿರುದ್ಧ ಖಟ್ಲೆಗೆ ಅನುಮತಿ ಪ್ರಶ್ನೆ: ರಾಜ್ಯಪಾಲರಿಗೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 13:40 IST
Last Updated 6 ಜುಲೈ 2012, 13:40 IST
ಸೋಳಂಕಿ ವಿರುದ್ಧ ಖಟ್ಲೆಗೆ ಅನುಮತಿ ಪ್ರಶ್ನೆ: ರಾಜ್ಯಪಾಲರಿಗೆ ಹೈಕೋರ್ಟ್ ನಿರ್ದೇಶನ
ಸೋಳಂಕಿ ವಿರುದ್ಧ ಖಟ್ಲೆಗೆ ಅನುಮತಿ ಪ್ರಶ್ನೆ: ರಾಜ್ಯಪಾಲರಿಗೆ ಹೈಕೋರ್ಟ್ ನಿರ್ದೇಶನ   

ಅಹಮದಾಬಾದ್ (ಪಿಟಿಐ): ಸುಮಾರು 400 ಕೋಟಿ ರೂಪಾಯಿ ಮೊತ್ತದ ಮೀನುಗಾರಿಕಾ ಗುತ್ತಿಗೆ ಹಗರಣದಲ್ಲಿ ವಹಿಸಿದ್ದಾರೆನ್ನಲಾದ ಪಾತ್ರಕ್ಕಾಗಿ ಸಚಿವ ಪುರುಷೋತ್ತಮ ಸೋಳಂಕಿ ವಿರುದ್ಧ ಖಟ್ಲೆ ಹೂಡಲು ಅನುಮತಿ ನೀಡುವ ವಿಚಾರದಲ್ಲಿ ~ಅಂತಿಮ ನಿರ್ಧಾರ~ ಕೈಗೊಳ್ಳುವಂತೆ ಗುಜರಾತ್ ಹೈಕೋರ್ಟ್ ರಾಜ್ಯಪಾಲರಾದ ಕಮ್ಲಾ ಬೇನಿವಾಲ್ ಅವರಿಗೆ ಶುಕ್ರವಾರ ನಿರ್ದೇಶನ ನೀಡಿತು.

ಇದರಿಂದಾಗಿ ಈ ಪ್ರಕರಣದಲ್ಲಿ ಗುಜರಾತ್ ಬಿಜೆಪಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಏನಿದ್ದರೂ ಖಟ್ಲೆ ಹೂಡಲು ಅನುಮತಿ ಮಂಜೂರು ಮಾರಲು ನಿರಾಕರಿಸಿದ ರಾಜ್ಯದ ಕ್ರಮಕ್ಕಾಗಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಲಯ ನಿಂದನೆ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.