ಶ್ರೀನಗರ (ಪಿಟಿಐ): ಕಾರ್ಗಿಲ್‌ನ ಲಡಾಕ್ ಪ್ರಾಂತ್ಯದಲ್ಲಿ ಶನಿವಾರ ಸಂಭವಿಸಿದ ಭಾರಿ ಹಿಮಪಾತದಲ್ಲಿ ಯೋಧನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ.
ನಸುಕಿನ ವೇಳೆ ಭಾರಿ ಪ್ರಮಾಣದಲ್ಲಿ ಹಿಮಪಾತ ಸಂಭವಿಸಿದ್ದು, ಸೇನೆಯ 168ನೇ ಪದಾತಿದಳದ ಸೈನಿಕ ರಾಜೀವ್ ಜಿ. ಹಿಮದಡಿ ಸಿಲುಕಿ ಮೃತಪಟ್ಟರು. ಇನ್ನೊಬ್ಬ ಸೈನಿಕ ಸತೀಶ್ ಪಾಟೀಲ್ ಅವರನ್ನು ರಕ್ಷಿಸಲಾಯಿತು. ಕಾಶ್ಮೀರ ವಿಭಾಗದ ಹಲವು ಭಾಗಗಳಲ್ಲಿ ಭಾರಿ ಹಿಮಪಾತ ಸಂಭವನೀಯತೆ ಬಗ್ಗೆ ಅಧಿಕಾರಿಗಳು ಶುಕ್ರವಾರ ಸಂಜೆ ಎಚ್ಚರಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.