ADVERTISEMENT

ಮಹಾವೀರಚಕ್ರ ವಿಜೇತ ಸೇನಾಧಿಕಾರಿ ಲೆಫ್ಟಿನೆಂಟ್‌ ಜನರಲ್‌ ವೋಹ್ರಾ ಕೊರೊನಾದಿಂದ ಸಾವು

ಪಿಟಿಐ
Published 16 ಜೂನ್ 2020, 12:10 IST
Last Updated 16 ಜೂನ್ 2020, 12:10 IST
ನಿವೃತ್ತ ಲೆಫ್ಟಿನೆಂಟ್‌ ಜನರಲ್ ರಾಜ್‌‌ ಮೋಹನ್‌ ವೋಹ್ರಾ
ನಿವೃತ್ತ ಲೆಫ್ಟಿನೆಂಟ್‌ ಜನರಲ್ ರಾಜ್‌‌ ಮೋಹನ್‌ ವೋಹ್ರಾ   

ನವದೆಹಲಿ: ಮಹಾವೀರ ಚಕ್ರ‍ಪ್ರಶಸ್ತಿ ವಿಜೇತ ನಿವೃತ್ತ ಲೆಫ್ಟಿನೆಂಟ್‌ ಜನರಲ್ ರಾಜ್‌‌ ಮೋಹನ್‌ ವೋಹ್ರಾ (88) ಅವರು ಕೋವಿಡ್‌–19 ನಿಂದ ಮೃತಪಟ್ಟಿದ್ದಾರೆ.

ಶಿಮ್ಲಾ ಮೂಲದ ಅವರು 1932ರಲ್ಲಿ ಜನಿಸಿದ್ದರು.‘ಹೃದಯ ಸಂಬಂಧಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು‌ ದೃಢಪಟ್ಟಿತ್ತು. ಜೂನ್‌ 14 ರಂದು ಅವರು ಸಾವನ್ನಪ್ಪಿದ್ದಾರೆ. ಅಂದೇ ಮೃತರ ಅಂತ್ಯಕ್ರಿಯೆ ನಡೆಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1971ರಲ್ಲಿ ಭಾರತ– ಪಾಕಿಸ್ತಾನ ನಡುವಿನ ಯುದ್ಧದಲ್ಲಿಅಪ್ರತಿಮ ಶೌರ್ಯ ಮೆರೆದ ಹಿನ್ನೆಲೆಯಲ್ಲಿ ವೋಹ್ರಾ ಅವರಿಗೆ 1972ರಲ್ಲಿಮಹಾವೀರ ಚಕ್ರ ‍ಪ್ರಶಸ್ತಿ ನೀಡಲಾಗಿತ್ತು.

ADVERTISEMENT

ಸೇನೆಯ ಪೂರ್ವ ಕಮಾಂಡ್‌ನ ಜನರಲ್‌ ಕಮಾಂಡಿಂಗ್‌ ಆಫೀಸರ್‌ ಆಗಿದ್ದರು. ಅಲ್ಲದೆ, ಶಸ್ತ್ರಸಜ್ಜಿತ ಸೇನಾ ವಿಭಾಗದ ಮುಖ್ಯ ಕಮಾಂಡಿಂಗ್‌ ಅಧಿಕಾರಿಯೂ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.