ADVERTISEMENT

ತೆಲಂಗಾಣ: ಸೇತುವೆಯಿಂದ 31 ನಾಯಿಗಳನ್ನು ಎಸೆದ ದುಷ್ಕರ್ಮಿಗಳು; 20 ಸಾವು

ಪಿಟಿಐ
Published 7 ಜನವರಿ 2025, 13:08 IST
Last Updated 7 ಜನವರಿ 2025, 13:08 IST
<div class="paragraphs"><p>ಬೀದಿ ನಾಯಿ (ಸಾಂಕೇತಿಕ ಚಿತ್ರ)</p></div>

ಬೀದಿ ನಾಯಿ (ಸಾಂಕೇತಿಕ ಚಿತ್ರ)

   

ಹೈದರಾಬಾದ್‌: ಅಪರಿಚಿತ ವ್ಯಕ್ತಿಗಳು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಸೇತುವೆಯೊಂದರ ಮೇಲಿಂದ 31 ನಾಯಿಗಳನ್ನು ಎಸೆದಿದ್ದು, ಅದರಲ್ಲಿ 20 ನಾಯಿಗಳು ಮೃತಪಟ್ಟು, 11 ಗಾಯಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಣಿದಯಾ ಸಂಘದ ಸ್ವಯಂ ಸೇವಕರು ದೂರು ದಾಖಲಿಸಿದ್ದು, ಎಡ್ಡುಮೈಲರಾಮ್ ಹಳ್ಳಿಯ ಬಳಿಯ ಸೇತುವೆ ಮೂಲಕ ನಾಯಿಗಳನ್ನು ಎಸೆಯಲಾಗಿದೆ. ಜನವರಿ 4ರಂದೇ ಘಟನೆ ವರದಿಯಾಗಿದೆ.

ADVERTISEMENT

ಬಿಎನ್‌ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಇಂದ್ರಕರಣ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ನಾಯಿಗಳನ್ನು ಬೇರೆಡೆ ಕೊಂದು, ಇಲ್ಲಿಗೆ ತಂದು ಎಸೆಯಲಾಗಿದೆಯೇ ಎಂಬ ಕೋನದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

20 ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಾಯಿಗಳಿಗೆ ವಿಷವುಣಿಸಲಾಗಿದೆಯೇ ಎಂಬ ಬಗ್ಗೆ ಪರೀಕ್ಷೆಯಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.

31 ನಾಯಿಗಳ ಪೈಕಿ 20 ಮೃತಪಟ್ಟಿದ್ದು, 11 ಗಾಯಗೊಂಡಿವೆ. ಗಾಯಗೊಂಡ ನಾಯಿಗಳನ್ನು ಪ್ರಾಣಿದಯಾ ಸಂಘಕ್ಕೆ ಹಸ್ತಾಂತರಿಸಲಾಗಿದ್ದು, ನಗೊಲೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.