ADVERTISEMENT

4 ವರ್ಷದ ಪದವಿ ಕೋರ್ಸ್‌ ರದ್ದು

​ಪ್ರಜಾವಾಣಿ ವಾರ್ತೆ
Published 27 ಜೂನ್ 2014, 19:30 IST
Last Updated 27 ಜೂನ್ 2014, 19:30 IST

ನವದೆಹಲಿ (ಪಿಟಿಐ): ವಿಶ್ವ­ವಿದ್ಯಾಲಯ ಅನು­ದಾನ ಆಯೋಗದ (ಯುಜಿಸಿ) ಒತ್ತ­ಡಕ್ಕೆ  ಮಣಿದ ದೆಹಲಿ ವಿಶ್ವವಿದ್ಯಾಲಯ, ನಾಲ್ಕು ವರ್ಷದ ಪದವಿ ಶಿಕ್ಷಣ ಕೋರ್ಸನ್ನು (ಎಫ್‌ಐಯುಪಿ­–ಫೋರ್‌ ಇಯರ್‌ ಅಂಡರ್‌ ಗ್ರಾಜುಯೇಟ್‌ ಪ್ರೋಗ್ರಾಮ್‌) ಶುಕ್ರವಾರ ರದ್ದು ಮಾಡಿದೆ.

ಈ ಹಿಂದೆ ಇದ್ದಂತೆ ಮೂರು ವರ್ಷಗಳ ಪದವಿ ಕೋರ್ಸ್‌ನ ಅನುಸಾರ 2014–15ರ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಿಸುವಂತೆ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ವಿವಿ ಕುಲಪತಿ ದಿನೇಶ್‌ ಸಿಂಗ್‌ ಅವರು ಸೂಚನೆ ನೀಡಿದ್ದಾರೆ.

‘ಯುಜಿಸಿ ನಿರ್ದೇಶನದ ಅನ್ವಯ ಎಫ್‌ಐಯುಪಿ­ ರದ್ದು ಮಾಡಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಈ ಹಿಂದೆ ಇದ್ದ ಮೂರು ವರ್ಷದ ಪದವಿ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆ  ಶುರುವಾಗಲಿದೆ’ ಎಂದು ಸಿಂಗ್‌್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವಿ ವ್ಯಾಪ್ತಿಯ 64 ಕಾಲೇಜುಗಳ 2.7 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಜೂನ್‌್ 24ರಿಂದಲೇ ಪ್ರವೇಶ ಪ್ರಕ್ರಿಯೆ ಶುರುವಾಗಬೇಕಿತ್ತು. ಆದರೆ ಎಫ್‌ಐಯುಪಿ­ ವಿಷಯವಾಗಿ ವಿವಿ ಹಾಗೂ ಯುಜಿಸಿ ನಡುವಣ ಜಟಾಪಟಿ  ಇದಕ್ಕೆ ಅಡ್ಡಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.