ನವದೆಹಲಿ: ಅಸ್ಸಾಂನಲ್ಲಿ ವಿದೇಶಿಯರ ನ್ಯಾಯಮಂಡಳಿ ಸುಮಾರು 20 ಸಾವಿರ ಜನರನ್ನು ವಿದೇಶಿಯರು ಎಂದು ಘೋಷಿಸಿರುವುದಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದರು.
2017ರ ಅಕ್ಟೋಬರ್ ವರೆಗೂ ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಗಳು 19,612 ಮತದಾರರನ್ನು ವಿದೇಶಿಯರೆಂದು ಘೋಷಿಸಿರುವುದಾಗಿ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಉತ್ತರಿಸಿದರು.
ಅನುಮಾನವಿರುವ ಮತದಾರರಿಗೆ ಕಾನೂನು ರೀತಿ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಜನರಿಗೆ ಕಿರುಕುಳ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈಗಾಗಲೇ ನ್ಯಾಯಮಂಡಳಿ ವಿದೇಶಿಯರೆಂದು ಘೋಷಿಸಿರುವವರನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.