ADVERTISEMENT

ರೈಲ್ವೆ ಎಂಜಿನ್‌ಗೆ ಉಪಗ್ರಹ ಸಂಪರ್ಕ

ಪಿಟಿಐ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ರೈಲ್ವೆ ಎಂಜಿನ್‌ಗೆ ಉಪಗ್ರಹ ಸಂಪರ್ಕ
ರೈಲ್ವೆ ಎಂಜಿನ್‌ಗೆ ಉಪಗ್ರಹ ಸಂಪರ್ಕ   

ನವದೆಹಲಿ: ಸಂಚರಿಸುತ್ತಿರುವ ರೈಲುಗಳ ಸುಲಭ ಪತ್ತೆಗೆ ಮತ್ತು ಸಂಪರ್ಕ ಸಾಧಿಸಲು ಎಲ್ಲ ಎಂಜಿನ್‌ಗಳಿಗೆ ಪ್ರಸಕ್ತ ವರ್ಷದ ಒಳಗೆ ಇಸ್ರೊ ಉಪಗ್ರಹ ಸಂಪರ್ಕ ಕಲ್ಪಿಸಲು ಭಾರತೀಯ ರೈಲ್ವೆ ಉದ್ದೇಶಿಸಿದೆ.

‘ಈ ವರ್ಷದ ಅಂತ್ಯದ ಒಳಗೆ 10,800 ಎಂಜಿನ್‌ಗಳ ಮೇಲೆ ಅಂಟೆನಾ ಅಳವಡಿಸಲಾಗುವುದು. ಈಗಾಗಲೇ ನವದೆಹಲಿ–ಗುವಾಹಟಿ ಮತ್ತು ನವದೆಹಲಿ–ಮುಂಬೈ ಮಾರ್ಗದಲ್ಲಿನ ಆರು ವಿದ್ಯುತ್‌ ಎಂಜಿನ್‌ಗಳ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಉಪಗ್ರಹ ಆಧಾರಿತ ವ್ಯವಸ್ಥೆ ಬಳಸಲು ಇಸ್ರೊ ಜತೆ ಜಂಟಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಇದರಿಂದ, ರೈಲ್ವೆ ಸಂಚಾರದ ಬಗ್ಗೆ ಮಾಹಿತಿ ತಿಳಿದುಕೊಂಡು ರಸ್ತೆ ದಾಟುವವರಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಲು ಅನುಕೂಲವಾಗುತ್ತದೆ. ಇದಕ್ಕಾಗಿ, ಈಗಾಗಲೇ ಕೆಲವು ರೈಲ್ವೆ ಎಂಜಿನ್‌ಗಳ ಮೇಲೆ ಇಸ್ರೊ ಅಭಿವೃದ್ಧಿಪಡಿಸಿದ ಇಂಟೆಗ್ರೇಟೆಡ್‌ ಸರ್ಕ್ಯೂಟ್‌ (ಐಸಿ) ಚಿಪ್‌ಗಳನ್ನು ಅಳವಡಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.