ADVERTISEMENT

ಇಂಡಿಯಾ ಗೇಟ್‌ ಬಳಿ ಸಂಗೀತ ಕಾರಂಜಿ ನಿರ್ಮಾಣ

ಪಿಟಿಐ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಇಂಡಿಯಾ ಗೇಟ್‌ ಬಳಿ ಸಂಗೀತ ಕಾರಂಜಿ ನಿರ್ಮಾಣ
ಇಂಡಿಯಾ ಗೇಟ್‌ ಬಳಿ ಸಂಗೀತ ಕಾರಂಜಿ ನಿರ್ಮಾಣ   

ನವದೆಹಲಿ: ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಇಲ್ಲಿನ ಇಂಡಿಯಾ ಗೇಟ್‌ ಮುಂದೆ ಆಕರ್ಷಕ ಸಂಗೀತ ಕಾರಂಜಿ ಮತ್ತು ದೀಪಗಳ ಅಲಂಕಾರ ಮಾಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪುನರಾಭಿವೃದ್ಧಿ ಯೋಜನೆಯಡಿ ವಿಜಯ್ ಚೌಕದಿಂದ ಇಂಡಿಯಾ ಗೇಟ್‌ ಮತ್ತು ನ್ಯಾಷನಲ್‌ ಸ್ಟೇಡಿಯಂವರೆಗೆ ₹45 ಕೋಟಿ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತದೆ.

‘ಮೂರು ವರ್ಣರಂಜಿತ ಸಂಗೀತ ಕಾರಂಜಿ ಅಲ್ಲದೆ ಇಂಡಿಯಾ ಗೇಟ್‌, ಬೋಟ್‌ ಕ್ಲಬ್‌ ಮತ್ತು ಸೆಂಟ್ರಲ್ ವಿಸ್ಪಾ ಪ್ರದೇಶದ ಸುತ್ತ ಹನ್ನೆರಡು ಸ್ಥಿರ ವರ್ಣರಂಜಿತ ಕಾರಂಜಿಗಳನ್ನು ಸ್ಥಾಪಿಸುವ ಯೋಜನೆ ಇದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಯುದ್ಧ ಸ್ಮಾರಕಕ್ಕೆ ಬರುವ ಪ್ರವಾಸಿಗರಿಗಾಗಿ ಪ್ರತಿ ಸಂಜೆ ಸಂಗೀತ ಮತ್ತು ಬೆಳಕಿನ ಪ್ರದರ್ಶನಗಳನ್ನು ಆಯೋಜಿಸಲಾಗುವುದು. ಇಂಡಿಯಾ ಗೇಟ್‌ನ ಹುಲ್ಲುಹಾಸುಗಳನ್ನು ಈಗಾಗಲೇ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಕೆಲಸ ಮುಂದಿನ ಏಪ್ರಿಲ್‌ನಲ್ಲಿ ಆರಂಭಗೊಳ್ಳಲಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ ಈ ಕಾರ್ಯ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.