ADVERTISEMENT

₹20 ಲಕ್ಷ ತೆರಿಗೆಮುಕ್ತ ಗ್ರಾಚ್ಯುಟಿ ಬಜೆಟ್‌ ಅಧಿವೇಶನದಲ್ಲಿ ಮಸೂದೆ?

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:24 IST
Last Updated 14 ಜನವರಿ 2018, 19:24 IST

ನವದೆಹಲಿ: ‘ಗ್ರಾಚ್ಯುಟಿ ಪಾವತಿ ತಿದ್ದುಪಡಿ ಮಸೂದೆ–2017’, ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಅಂಗೀಕಾರ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೆ ಸಂಘಟಿತ ವಲಯದ ನೌಕರರು ₹20 ಲಕ್ಷ ತೆರಿಗೆಮುಕ್ತ ಗ್ರಾಚ್ಯುಟಿ ಪಡೆಯಲು ಅರ್ಹರಾಗಲಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗಿತ್ತು.

ಸದ್ಯ, ಐದಕ್ಕಿಂತ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸಂಘಟಿತ ವಲಯದ ನೌಕರರು ₹10 ಲಕ್ಷ ತೆರಿಗೆಮುಕ್ತ ಗ್ರಾಚ್ಯುಟಿ ಪಡೆಯಬಹುದಾಗಿದೆ.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.