ADVERTISEMENT

ಉ.ಪ್ರದೇಶ: ಪೊಲೀಸರ ಗುಂಡಿಗೆ ಬಾಲಕ ಬಲಿ?

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST

ಲಖನೌ: ಇತ್ತೀಚೆಗೆ ಹಲವು ಎನ್‌ಕೌಂಟರ್‌ಗಳ ಕುಖ್ಯಾತಿಗೆ ಗುರಿಯಾದ ಇಲ್ಲಿನ ಪೊಲೀಸರು, ಮಥುರಾದಲ್ಲಿ ಬುಧವಾರ 8 ವರ್ಷದ ಬಾಲಕನ ಎನ್‌ಕೌಂಟರ್ ಮಾಡಿದ ಆರೋಪ ಕೇಳಿಬಂದಿದೆ.

ಮೋಹನ್‌ಪುರ ಗ್ರಾಮದಲ್ಲಿ ಪೊಲೀಸ್ ಒಬ್ಬರು ಹಾರಿಸಿದ ಗುಂಡು ಹೆದ್ದಾರಿ ಪಕ್ಕ ಹಣ್ಣು ಕೀಳುತ್ತಿದ್ದ ಮಾಧವ್ ಎಂಬ ಬಾಲಕನ ಹಣೆಗೆ ತಗುಲಿ ಆತ ಮೃತಪಟ್ಟಿದ್ದಾನೆ ಎನ್ನಗಿದೆ.

‘ಗುಂಡಿನ ಸದ್ದು ಕೇಳಿ ಗ್ರಾಮಸ್ಥರು ಓಡಿ ಬಂದಾಗ ಪೊಲೀಸರು ಜಾಗ ಖಾಲಿ ಮಾಡಿದ್ದಾರೆ’ ಎಂದು ಹೇಳಲಾಗಿದೆ.

ADVERTISEMENT

‘ಸಹಾಯಕೇಂದ್ರಕ್ಕೆ ಕರೆ ಮಾಡಲಾಯಿತು. ವಾಹನ ತಡವಾಗಿ ಬಂದಿತ್ತು. ಆದರೆ ರಕ್ತ ಸೋರುತ್ತಿದ್ದ ಬಾಲಕನನ್ನು ಗಾಡಿಯಿಂದ ಇಳಿಸಿಕೊಳ್ಳಿ ಎಂದ ಪೊಲೀಸರು ಅರ್ಧದಲ್ಲೇ ಇಳಿಸಿದರು’ ಎಂದು ಬಾಲಕನ ತಂದೆ ತಿಳಿಸಿದ್ದಾರೆ.

ಬಾಲಕನ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡುವುದಾಗಿ ಹಾಗೂ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ಸರ್ಕಾರ ಘೋಷಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಸಬ್ ಇನ್‌ಸ್ಪೆಕ್ಟರ್ ಒಳಗೊಂಡು ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.