ADVERTISEMENT

ಉರುಳಿದ ಅನಿಲ ಟ್ಯಾಂಕರ್‌: ಜನರ ಸ್ಥಳಾಂತರ

ಪಿಟಿಐ
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST

ಪಣಜಿ: ಅಮೋನಿಯಾ ಅನಿಲ ತುಂಬಿದ್ದ ಟ್ಯಾಂಕರ್‌ ಒಂದು ವಾಸ್ಕೊ ನಗರ– ಪಣಜಿ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಉರುಳಿಬಿದ್ದು ಅನಿಲ ಸೋರಿಕೆ ಆಗಲಾರಂಭಿಸಿದ್ದರಿಂದ, ಸಮೀಪದ ಚಿಕಲಿಮ್‌ ಎಂಬ ಗ್ರಾಮದ ಎಲ್ಲ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

‘ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. ಅನಿಲ ಸೋರಿಕೆ ಆಗ ತೊಡಗಿದ್ದರಿಂದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಹಾಗಾಗಿ, ಅಪಾಯ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಕೂಡಲೇ ಅವರನ್ನು ಸ್ಥಳಾಂತರಿಸಬೇಕು ಎಂದು ಪೊಲೀಸ್‌, ಅಗ್ನಿಶಾಮಕ ಹಾಗೂ ತುರ್ತುಸೇವಾ ಇಲಾಖೆಗಳಿಗೆ ನಿರ್ದೇಶನ ನೀಡಿದ್ದೆವು’ ಎಂದು ಉಪವಿಭಾಗಾಧಿಕಾರಿ ಮಹಾದೇವ್‌ ಅರೊಂಡೆಕರ್‌ ಹೇಳಿದ್ದಾರೆ.

ಹೆದ್ದಾರಿಯ ಮೇಲಿನ ವಾಹನ ಸಂಚಾರವನ್ನೂ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.