ADVERTISEMENT

ಜಮ್ಮು–ಕಾಶ್ಮೀರದಲ್ಲಿ ಲಘು ಹಿಮಪಾತದ ಮುನ್ಸೂಚನೆ

ಪಿಟಿಐ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಜಮ್ಮು–ಕಾಶ್ಮೀರದಲ್ಲಿ ಲಘು ಹಿಮಪಾತದ ಮುನ್ಸೂಚನೆ
ಜಮ್ಮು–ಕಾಶ್ಮೀರದಲ್ಲಿ ಲಘು ಹಿಮಪಾತದ ಮುನ್ಸೂಚನೆ   

ಜಮ್ಮು/ಶ್ರೀನಗರ: ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯೊಳಗೆ ಲಘು ಹಿಮಪಾತ ಆಗಬಹುದು ಎಂದು ಹಿಮ ಮತ್ತು ಹಿಮಪಾತ ಅಧ್ಯಯನ ಸಂಸ್ಥೆ ಮುನ್ಸೂಚನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

‘ಜಮ್ಮುವಿನ ಏಳು ಜಿಲ್ಲೆಗಳು, ಕಾಶ್ಮೀರದ ಆರು ಜಿಲ್ಲೆಗಳು ಮತ್ತು ಲಡಾಖ್‌ನ ಎರಡು ಜಿಲ್ಲೆಗಳ ಎತ್ತರ ಪ್ರದೇಶಗಳಲ್ಲಿ ಮೊದಲ ಹಂತದ, ಕಡಿಮೆ ಅಪಾಯಕಾರಿಯಾದ ಹಿಮಪಾತ ಆಗಲಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಎತ್ತರ ಪ್ರದೇಶಗಳಲ್ಲಿ ಎರಡನೇ ಹಂತದ, ಲಘು ಹಿಮಪಾತ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಜಿಲ್ಲೆಗಳ ಎತ್ತರ ಪ್ರದೇಶಗಳ ಜನರು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.