ADVERTISEMENT

ಸಾಮೂಹಿಕ ಅತ್ಯಾಚಾರ: ದೂರು ದಾಖಲಿಸದಂತೆ ಸಂತ್ರಸ್ತೆಗೆ ಬೆದರಿಕೆ

ಪಿಟಿಐ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST

ಹಾರ್ದಾ(ಮಧ್ಯಪ್ರದೇಶ): ಬೇತುಲ್ ಜಿಲ್ಲೆಯ ಬುಡಕಟ್ಟು ಜನಾಂಗದ ಹದಿನಾರು ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ದೂರು ದಾಖಲಿಸದಂತೆ ಸ್ಥಳೀಯರು ಬಾಲಕಿಗೆ ಬೆದರಿಕೆ ಒಡ್ಡಿದ್ದಾರೆ.

‘ಜನವರಿ 11ರಂದು ಬೈಕ್‌ನಲ್ಲಿ ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಬಾಲಕಿಯನ್ನು ಹತ್ತಿಸಿಕೊಂಡು, ಮತ್ತು ಬರುವ ಪಾನೀಯ ಕುಡಿಸಲಾಗಿದೆ. ನಂತರ ಅತ್ಯಾಚಾರ ಮಾಡಲಾಗಿದೆ. ಅದೇ ದಿನ ಸಂಜೆ ಬಾಲಕಿ ತನ್ನ ತಂದೆ ಮತ್ತು ಅಜ್ಜಿಗೆ ವಿಷಯ ತಿಳಿಸಿದ್ದಳು. ಆದರೆ, ದೂರು ದಾಖಲಿಸದಂತೆ ಗ್ರಾಮಸ್ಥರು ಬೆದರಿಕೆ ಒಡ್ಡಿದ್ದರು’ ಎಂದು ಪೊಲೀಸ್‌ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

‘ಪರಿಹಾರ ರೂಪದಲ್ಲಿ ನಿಮಗೆ ಹಣ ನೀಡುತ್ತೇವೆ. ಯಾವುದೇ ಕಾರಣಕ್ಕೂ ದೂರು ದಾಖಲಿಸಬಾರದು ಎಂದು ಅತ್ಯಾಚಾರಕ್ಕೆ ಒಳಗಾಗಿರುವ 11ನೇ ತರಗತಿ ಬಾಲಕಿ ಮತ್ತು ಆಕೆಯ ಕುಟುಂಬ ಸದಸ್ಯರೊಂದಿಗೆ ಆಕೆಯ ಗ್ರಾಮಸ್ಥರು ಪಂಚಾಯಿತಿ ನಡೆಸಿ, ಬೆದರಿಕೆ ಒಡ್ಡಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಆದರೆ, ಕೆಲ ಸಂಬಂಧಿಕರ ಸಹಾಯದಿಂದ ಹರ್ದಾದ ಕೊಟ್ವಾಲಿ ಪೊಲೀಸ್ ಠಾಣೆಗೆ ಬಂದ ಬಾಲಕಿ, ಮಂಗಳವಾರ ದೂರು ದಾಖಲಿಸಿದ್ದಾಳೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.