ADVERTISEMENT

ಎಐಡಿಎಂಕೆ: 155 ಪದಾಧಿಕಾರಿಗಳ ವಜಾ

ಪಕ್ಷ ವಿರೋಧಿ ಚಟುವಟಿಕೆ

ಪಿಟಿಐ
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST

ಚೆನ್ನೈ : ಆರ್‌.ಕೆ.ನಗರ ಉಪಚುನಾವಣೆ ಸೋಲಿನ ಬಳಿಕ ಪಕ್ಷವಿರೋಧಿ ಚಟುವಟಿಕೆ ನಡೆಸಿದ ಕೊಯಮತ್ತೂರಿನ ಲೋಕಸಭಾ ಸಂಸದ ಪಿ.ನಾಗರಾಜನ್‌ ಅವರನ್ನು ಪಕ್ಷದ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಅದೇ ರೀತಿ ಕಾಂಚೀಪುರ ಜಿಲ್ಲೆಯ ಪಕ್ಷದ ಪದಾಧಿಕಾರಿಗಳನ್ನೂ ವಜಾಗೊಳಿಸಲಾಗಿದೆ.‌

ಎಐಎಡಿಎಂಕೆ ಸಂಚಾಲಕ ಓ.ಪನೀರ್‌ಸೆಲ್ವಂ ಮತ್ತು ಸಹಸಂಚಾಲಕ ಕೆ.ಪಳನಿಸ್ವಾಮಿ ನೀಡಿರುವ ಜಂಟಿ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ‘ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡ, ಪಕ್ಷಕ್ಕೆ ಅಗೌರವ ತೋರಿದ ಕಾರಣಕ್ಕೆ 155 ಪದಾಧಿಕಾರಿಗಳನ್ನು ವಜಾಗೊಳಿಸಲಾಗಿದೆ. 137 ಮಂದಿ ಕಾಂಚೀಪುರ ಜಿಲ್ಲೆಗೆ ಸೇರಿದವರಾಗಿದ್ದು, 18 ಮಂದಿ ಕೊಯಂಬತ್ತೂರ ನಗರ ಘಟಕಕ್ಕೆ ಸೇರಿದವರು’ ಎಂದು ತಿಳಿಸಲಾಗಿದೆ.

ಸೋಮವಾರ ಶಿವಗಂಗಾ ಜಿಲ್ಲೆಯ ಇಬ್ಬರು ನಾಯಕರು ಹಾಗೂ 117 ಪದಾಧಿಕಾರಿಗಳನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.