ADVERTISEMENT

‘ಕಾರಂಜ್’ ಜಲಾಂತರ್ಗಾಮಿಗೆ ಚಾಲನೆ

ಪಿಟಿಐ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
‘ಕಾರಂಜ್’ ಜಲಾಂತರ್ಗಾಮಿಗೆ ಚಾಲನೆ
‘ಕಾರಂಜ್’ ಜಲಾಂತರ್ಗಾಮಿಗೆ ಚಾಲನೆ   

ಮುಂಬೈ: ಸಂಸ್ಕೃತ ಶ್ಲೋಕ, ಯಜುರ್ವೇದ ಮಂತ್ರ ಪಠಣ ಹಾಗೂ ಸಾಂಪ್ರದಾಯಿಕ ಪೂಜೆ ಬಳಿಕ ಸ್ಕಾರ್ಪೀನ್ ಸರಣಿಯ ಮೂರನೇ ಜಲಾಂತರ್ಗಾಮಿ ನೌಕೆ ‘ಕಾರಂಜ್’ ಬುಧವಾರ ಲೋಕಾರ್ಪಣೆಗೊಂಡಿತು.

ಇಲ್ಲಿನ ಮಜಗಾಂವ್ ಹಡಗುಕಟ್ಟೆಯಲ್ಲಿ ನೌಕಾದಳದ ಮುಖ್ಯಸ್ಥ ಸುನೀಲ್ ಲಾಂಬಾ ಅವರು ಜಲಾಂತರ್ಗಾಮಿಯನ್ನು ಉದ್ಘಾಟಿಸಿದರು. ಕಾರ್ಯಾಚರಣೆಗೂ ಮುನ್ನ ಸಮುದ್ರ ಹಾಗೂ ಬಂದರುಗಳಲ್ಲಿ ವಿವಿಧ ಪರೀಕ್ಷೆ ಹಾಗೂ ಕಠಿಣ ಪ್ರಯೋಗಗಳಿಗೆ ಇದನ್ನು ಒಳಪಡಿಸಲಾಗುತ್ತದೆ.

ಮಜಗಾಂವ್ ಹಡಗುಕಟ್ಟೆಯಲ್ಲಿ ಒಟ್ಟು ಆರು ಸಬ್‌ಮೆರಿನ್‌ಗಳನ್ನು ನಿರ್ಮಿಸಲಾಗುತ್ತಿದೆ. ಫ್ರಾನ್ಸ್‌ನ ಡಿಸಿಎನ್‌ಎಸ್‌ ಹಡಗು ನಿರ್ಮಾಣ ಸಂಸ್ಥೆಯ ಸಹಯೋಗದಲ್ಲಿ ಇವು ತಯಾರಾಗುತ್ತಿವೆ. 

ADVERTISEMENT

ಈ ಮೊದಲು ‘ಕಾರಂಜ್’ ಹೆಸರಿನ ನೌಕೆಯು 1971ರ ಯುದ್ಧದಲ್ಲಿ ಭಾಗಿಯಾಗಿತ್ತು. 1969ರಿಂದ ಒಟ್ಟು 34 ವರ್ಷಗಳ ಕಾಲ ಸೇವೆ ಸಲ್ಲಿಸಿ, 2003ರಲ್ಲಿ ಕಾರ್ಯಾಚರಣೆ ಸ್ಥಗಿತೊಗಳಿಸಿತ್ತು.

ಐಎನ್ಎಸ್ ಕಲ್ವರಿ

ಸ್ಕಾರ್ಪೀನ್ ಸರಣಿಯ ಮೊದಲ ಜಲಾಂತರ್ಗಾಮಿ ಡಿ.14, 2017ರಂದು ಕಾರ್ಯಾಚರಣೆ ಆರಂಭ

ಐಎನ್‌ಎಸ್‌ ಖಾಂಡೇರಿ

2017ರ ಜನವರಿ 12ರಂದು ಉದ್ಘಾಟನೆಗೊಂಡಿದ್ದ ಸ್ಕಾರ್ಪೀನ್ ಸರಣಿಯ ಎರಡನೇ ಜಲಾಂತರ್ಗಾಮಿಯು ಇದೇ ವರ್ಷಾಂತ್ಯದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಲಿದೆ.

***

ವೈಶಿಷ್ಟ್ಯತೆಗಳು:

* ಶಬ್ದಶೋಧಕಗಳಿಂದಲೂ (ಸೋನಾರ್) ಪತ್ತೆಯಾಗದಂತೆ ರಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನ

* ಕಡಿಮೆ ಮಟ್ಟದ ವಿಕಿರಣ ಶಬ್ದ

* ನೀರನ್ನು ಸುಲಭವಾಗಿ ಸೀಳಿಕೊಂಡು ಹೋಗುವಂತೆ ನೌಕೆಯ ವಿನ್ಯಾಸ

* ನಿಖರ ಮಾರ್ಗದರ್ಶಿ ಶಸ್ತ್ರಾಸ್ತ್ರ ಬಳಸಿ ವೈರಿಪಡೆ ಮೇಲೆ ದಾಳಿ ನಡೆಸುವ ಸಾಮರ್ಥ್ಯ

* ಟಾರ್ಪೆಡೊಗಳು ಮತ್ತು ನೌಕೆ ನಿರೋಧಕ ಕ್ಷಿಪಣಿ ವ್ಯವಸ್ಥೆ

* ನೌಕೆಗೆ ಆಗಬಹುದಾದ ಹಾನಿ ತಡೆಗಟ್ಟುವ ರಹಸ್ಯ ವ್ಯವಸ್ಥೆ

* ಬಹುತೇಕ ಜಲಾಂತರ್ಗಾಮಿಗಳಲ್ಲಿ ಇಲ್ಲದ ವಿಶೇಷತೆಗಳನ್ನು ಹೊಂದಿದೆ

*ತರಬೇತಿ ಮತ್ತು ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಸಂಪೂರ್ಣ ಸ್ವಾವಲಂಬನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.