ADVERTISEMENT

2019ರ ಮಾರ್ಚ್‌ನೊಳಗೆ ಟೋಲ್‌ಗಳಲ್ಲಿ ಶೌಚಾಲಯ

ಪಿಟಿಐ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

ನವದೆಹಲಿ: ಶೌಚಾಲಯ ಸೌಲಭ್ಯ ಇಲ್ಲದಿರುವ 180 ಟೋಲ್‌ ಕೇಂದ್ರಗಳಲ್ಲಿ 2019ರ ಮಾರ್ಚ್‌ ಕೊನೆಯೊಳಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಶೌಚಾಲಯ ಸೌಲಭ್ಯ ಒದಗಿಸಲಿದೆ ಎಂದು ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಪ್ರತಿ ಟೋಲ್‌ ಕೇಂದ್ರದ ಎರಡೂ ಭಾಗಗಳಲ್ಲಿ ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರತ್ಯೇಕಶೌಚಾಲಯಗಳನ್ನು ಒದಗಿಸುವ ಯೋಜ
ನೆಯನ್ನು ಎನ್‌ಎಚ್‌ಎಐ ಹೊಂದಿದೆ.

ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಟೋಲ್‌ ಕೇಂದ್ರಗಳಸಮೀಪ ಕಸದ ಬುಟ್ಟಿಗಳನ್ನೂ ಇರಿಸಲಾಗುವುದು. ಜತೆಗೆ ಸ್ವಚ್ಛತೆಯ ಮಹತ್ವವನ್ನು ಸಾರುವ ಫಲಕಗಳನ್ನೂ ಅಳವಡಿಸಲಾಗುವುದು. ಜನರು ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂಬ ಜಾಗೃತಿ ಮೂಡಿಸುವ ಉದ್ದೇಶವನ್ನು ಇದು  ಹೊಂದಿದೆ.

ADVERTISEMENT

2019 ಸ್ವಚ್ಛ ಭಾರತ ಅಭಿಯಾನದ ಕೊನೆಯ ವರ್ಷ. ಅಭಿಯಾನ ಕೊನೆಗೊಳ್ಳುವುದರೊಳಗೆ ಎಲ್ಲ ಟೋಲ್‌ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಿಸುವ ಗುರಿಯನ್ನು ಎನ್‌ಎಚ್‌ಎಐ ಹೊಂದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಶೌಚಾಲಯ ನಿರ್ಮಾಣದ ಕಾಮಗಾರಿ ಪ್ರಗತಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.