ADVERTISEMENT

ವಿವಾಹ ವಿಚಾರದಲ್ಲಿ ಖಾಪ್ ಪಂಚಾಯತ್ ಮಧ್ಯ‍ಪ್ರವೇಶಿಸಬಾರದು: ಸುಪ್ರೀಂ ಕೋರ್ಟ್

ಏಜೆನ್ಸೀಸ್
Published 5 ಫೆಬ್ರುವರಿ 2018, 9:36 IST
Last Updated 5 ಫೆಬ್ರುವರಿ 2018, 9:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಬ್ಬರು ವಯಸ್ಕರ ನಡುವಣ ವಿವಾಹವನ್ನು ಖಾಪ್ ಪಂಚಾಯತ್, ಯಾರೇ ಆಗಲಿ, ಸಮಾಜ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಖಾಪ್ ಪಂಚಾಯತ್‌ಗಳ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ‘ಇಬ್ಬರು ವಯಸ್ಕರು ವಿವಾಹವಾಗಲು ನಿರ್ಧರಿಸಿದರೆ ಖಾಪ್ ಪಂಚಾಯತ್ ಮಾತ್ರವಲ್ಲದೆ ಯಾರೂ ಮಧ್ಯಪ್ರವೇಶಿಸಬಾರದು’ ಎಂದು ಹೇಳಿದೆ.

ಅಂತರ್ಜಾತಿ ವಿವಾಹವಾಗುವವರ ಮೇಲೆ ಹಲ್ಲೆ ನಡೆಸುವುದು ಕಾನೂನು ಬಾಹಿರ ಎಂದು ಈ ಹಿಂದಿನ ವಿಚಾರಣೆ ವೇಳೆ ಕೋರ್ಟ್ ಹೇಳಿತ್ತು.

ADVERTISEMENT

ತಮ್ಮ ಆಯ್ಕೆಯ ವಿವಾಹವಾಗುವ ಪುರುಷ ಮತ್ತು ಸ್ತ್ರೀಯನ್ನು ಶಿಕ್ಷಿಸುವಂತಿಲ್ಲ. ಖಾಪ್ ಪಂಚಾಯತ್ ಸಮಾಜದ ಪ್ರತಿನಿಧಿಯಾಗಿರಬಹುದು. ಆದರೆ, ಪುರಾತನ ಎಂಬ ಕಾರಣಕ್ಕೆ ಮದುವೆಯಾಗುವವರನ್ನು ಪ್ರಶ್ನಿಸಲಾಗದು ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೂ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮರ್ಯಾದಾ ಹತ್ಯೆ, ಹಲ್ಲೆ ಮುಂತಾದ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ‘ಶಕ್ತಿವಾಹಿನಿ’ ಎಂಬ ಸ್ವಯಂಸೇವಾ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.