ADVERTISEMENT

ಭಾರತ ವಿನಯ್ ಕಟಿಯಾರ್ ಅಪ್ಪನ ದೇಶನಾ?- ಫರೂಕ್ ಅಬ್ದುಲ್ಲಾ

ಏಜೆನ್ಸೀಸ್
Published 8 ಫೆಬ್ರುವರಿ 2018, 9:36 IST
Last Updated 8 ಫೆಬ್ರುವರಿ 2018, 9:36 IST
ಭಾರತ ವಿನಯ್ ಕಟಿಯಾರ್ ಅಪ್ಪನ ದೇಶನಾ?- ಫರೂಕ್ ಅಬ್ದುಲ್ಲಾ
ಭಾರತ ವಿನಯ್ ಕಟಿಯಾರ್ ಅಪ್ಪನ ದೇಶನಾ?- ಫರೂಕ್ ಅಬ್ದುಲ್ಲಾ   

ನವದೆಹಲಿ: ಭಾರತ ವಿನಯ್ ಕಟಿಯಾರ್ ಅವರ ಅಪ್ಪನ ದೇಶನಾ?..ಇದು ನಮ್ಮೆಲ್ಲರ ದೇಶ. ಪ್ರತಿಯೊಬ್ಬರಿಗೂ ಸೇರಿದ್ದು ಎಂದು ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅವರು ವಿನಯ್ ಕಟಿಯಾರ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಸಂಸದ ವಿನಯ್ ಕಟಿಯಾರ್ ಅವರು, ಮುಸ್ಲಿಮರನ್ನು ಭಾರತದಲ್ಲಿ ನೆಲೆಸಲು ಬಿಡಬಾರದು ಎಂದು ಬುಧವಾರ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಫರೂಕ್ ಅವರು, ವಿನಯ್ ಅವರು ನೀಡಿದ ಹೇಳಿಕೆ ಹಿಂಸೆಯನ್ನು ಪ್ರಚೋದಿಸುತ್ತದೆ. ಇದು ಧಾರ್ಮಿಕ ಹಿಂಸಾಚಾರದ ವಿಚಾರವಲ್ಲ. ಪ್ರತಿಯೊಂದು ಧರ್ಮವು ಜನರಿಗೆ ಶಾಂತಿ ಮತ್ತು ಪ್ರೀತಿಯನ್ನು ಸಾರಬೇಕು ಎಂದು ಬೋಧಿಸುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಬಿಜೆಪಿ ಸಂಸದ ವಿನಯ್ ಕಟಿಯಾರ್ ಅವರು, ಮುಸ್ಲಿಮರ ವಾಸಕ್ಕಾಗಿ ಪ್ರತ್ಯೇಕ ಪ್ರಾಂತ್ಯ ನೀಡಲಾಗಿದೆ. ಅವರು ಬಾಂಗ್ಲಾದೇಶ ಅಥವಾ ಪಾಕಿಸ್ತಾನಕ್ಕೆ ಹೋಗಲಿ, ಭಾರತದಲ್ಲೇ ಯಾಕೆ ಇರಬೇಕು? ಎಂದು ಮುಸ್ಲಿಮರ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.