ADVERTISEMENT

ದೆಹಲಿಯಲ್ಲಿ ಅನಿಲ ಸ್ಫೋಟ: ಮಗು ಸೇರಿ 7 ಜನ ಸಾವು

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 20:29 IST
Last Updated 3 ಜನವರಿ 2019, 20:29 IST
   

ನವದೆಹಲಿ: ಪಶ್ಚಿಮ ದೆಹಲಿಯ ಮೋತಿ ನಗರದ ಫ್ಯಾಕ್ಟರಿಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಮಗು ಸೇರಿ 7ಮಂದಿ ಸಾವಿಗೀಡಾಗಿದ್ದಾರೆ.

ಗುರುವಾರ ರಾತ್ರಿ ನಡೆದಿರುವ ಸ್ಫೋಟದಿಂದಾಗಿ ಕಟ್ಟಡ ಕುಸಿದ ಸಂಭವಿಸಿದ್ದು, ಈಗಾಗಲೇ 15 ಜನರನ್ನು ರಕ್ಷಿಸಲಾಗಿದೆ.7–8 ಮಂದಿ ಕಟ್ಟಡದೊಳಗೆ ಸಿಲುಕಿದ್ದಾರೆ.

ಎರಡು ಹಂತದ ಫ್ಯಾಕ್ಟರಿ ಕಟ್ಟಡದಲ್ಲಿಸೀಲಿಂಗ್‌ ಫ್ಯಾನ್‌ಗಳಿಗೆ ಪೇಂಟಿಂಗ್‌ ಮಾಡಲಾಗುತ್ತಿತ್ತು. ಅಗ್ನಿಶಾಮಕ ಇಲಾಖೆಗೆ ರಾತ್ರಿ 8:48ಕ್ಕೆ ಅವಘಡದ ಕುರಿತು ಮಾಹಿತಿ ಬಂದಿದ್ದು, 8 ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆ ಕಳುಹಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.